ಕಳೆದ ವರ್ಷ ಇದೇ ಸಮಯದಲ್ಲಿ ಕೊರೋನಾ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗಿ ನಾವು ನೀವೆಲ್ಲ ಮನೆಯಲ್ಲಿ ಲಾಕ್ ಆಗಿದ್ವಿ. ಈ ವರ್ಷವಾದರೂ ಆರಾಮಾಗಿ ತಿರುಗಾಡೋಣವೆಂದರೆ, ಕೊರೋನಾ ಎರಡನೇಯ ಅಲೆ ಶುರುವಾಗಿದೆ. ಹೀಗಿರುವಾಗ, ಎಚ್ಚರದಿಂದಿರಬೇಕಾದ ಕೆಲವರು ನಿರಾತಂಕವಾಗಿದ್ದಾರೆ. ಬಾಲಿವುಡ್ ನಟಿಯೊಬ್ಬರು ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದಿದ್ದರೂ, ಶೂಟಿಂಗ್‌ಗೆ ಆಗಮಿಸಿದ್ದಾರೆ. ಈ ಕಾರಣಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.



ಹಿಂದಿ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಗೌಹರ್ ಖಾನ್, ಇದೀಗ ಕೊರೊನಾ ವಿಷಯದಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೊರೊನಾ ಪಾಸಿಟಿವ್ ಬಂದಿದ್ದರೂ, ಅದು ಬೇರೆಯವರಿಗೆ ತಗುಲಬಹುದೆಂದು ಗೊತ್ತಿದ್ದರೂ ಕೂಡ, ಗೌಹರ್ ಶೂಟಿಂಗ್‌ಗೆ ಆಗಮಿಸಿದ್ದಾರೆ. ಈ ಕಾರಣಕ್ಕೆ ಅವರ ವಿರುದ್ಧ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರಲ್ಲದೇ, ಅವರನ್ನ ಕ್ವೌರಂಟೈನ್‌ನಲ್ಲಿ ಇರಿಸಲಾಗಿದೆ.
ಗೌಹರ್ ಶೂಟಿಂಗ್‌ಗೆ ಹೋಗುವುದಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ವೇಳೆ ಗೌಹರ್ ಮನೆಗೆ ಕ್ವಾರಂಟೈನ್ ನೋಟೀಸ್ ಅಂಟಿಸಲು ಬಂದಾಗ, ಬಾಗಿಲು ತೆರೆಯದೇ ಉದ್ಧಟತನ ತೋರಿದ್ದಾರೆ. ಇದೇ ಕಾರಣಕ್ಕೆ ಗೌಹರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

