ಜೊಮೇಟೋ ಕೇಸ್: ಯುವತಿ ವಿರುದ್ಧ ಕೇಸ್ ಹಾಕಿ ಹೋರಾಡುತ್ತೇನೆಂದ ಕಾಮರಾಜ್

ಕೆಲ ದಿನಗಳ ಹಿಂದಷ್ಟೇ ಜೋಮೆಟೋ ಡಿಲೆವರಿ ವ್ಯಕ್ತಿಯೋರ್ವ ತನ್ನ ಮೇಲೆ ಹಲ್ಲೆ ಮಾಡಿ, ಮೂಗಿಗೆ ಗಾಯ ಮಾಡಿದ್ದಾನೆಂದು, ಬೆಂಗಳೂರಿನ ಯುವತಿ ಹಿತೇಷಾ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿಬಿಟ್ಟಿದ್ದಳು. ಕೆಲ ದಿನಗಳ ಕಾಲ ಈಕೆಯ ಮಾತನ್ನ ಎಲ್ಲರೂ ನಂಬಿದ್ದರು.

ಆದ್ರೆ ತದನಂತರ, ಜೋಮೆಟೋ ಹುಡುಗ ಕಾಮರಾಜ್, ತನ್ನ ಹೇಳಿಕೆಯ ವೀಡಿಯೋ ಹರಿಬಿಟ್ಟಿದ್ದು, ನಾನೇನು ತಪ್ಪು ಮಾಡಿಲ್ಲ. ಆಕೆ ತಿಂಡಿಯನ್ನ ಉಚಿತವಾಗಿ ಕೊಡಲು ಹೇಳಿದಳು. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ. ಆದ್ದರಿಂದ ನೀನು ಲೇಟ್ ಆಗಿ ಬಂದೆ ಎಂದು ದೂರಿ ನನ್ನನ್ನು ಚಪ್ಪಲಿಯಿಂದ ಹೊಡೆದಿದ್ದಾಳೆ. ಈ ವೇಳೆ ತಪ್ಪಿಸಿಕೊಳ್ಳಲು ಹೋಗಿ, ಆಕೆಯ ಮೂಗಿಗೆ ಗಾಯಮವಾಗಿದೆ. ಆದ್ರೆ ಬೇಕಂತಲೇ ನಾನೇನು ಹಲ್ಲೆ ಮಾಡಿಲ್ಲ ಎಂದು ಕಣ್ಣೀರು ಹಾಕಿದ್ದ.  

ಇದೀಗ, ಯುವತಿ ಸುಳ್ಳು ಆರೋಪ ಮಾಡಿದ್ದಾಳೆ, ನಾನು ಆಕೆಯ ವಿರುದ್ಧ ಕೇಸ್ ದಾಖಲಿಸಿ, ನ್ಯಾಯಕ್ಕಾಗಿ ಹೋರಾಡುತ್ತೇನೆಂದು ಕಾಮರಾಜ್ ಹೇಳಿದ್ದಾನೆ. ಇದೀಗ ಹಿತೇಷಾ ವಿರುದ್ಧ ಕೇಸ್ ದಾಖಲಾಗಿದೆ.

About The Author