ಕೊರೋನಾ ಮಹಾಮಾರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಇನ್ನುಳಿದ ಮೂರು ಟಿ20 ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶವನ್ನು ರದ್ದುಗೊಳಿಸಲಾಗಿದೆ.



ಅಹಮದಾಬಾದ್‌ನಲ್ಲಿ ನಡೆಯಲಿರುವ ಮೂರು ಟಿ20 ಪಂದ್ಯಗಳ ಬಗ್ಗೆ ಮಾತನಾಡಿದ ಗುಜರಾತ್ ಕ್ರಿಕೇಟ್ ಅಸೋಸಿಯೇಶನ್ ಈ ಬಗ್ಗೆ ಮಾಹಿತಿ ನೀಡಿದೆ. ಗುಜರಾತ್‌ನಲ್ಲೂ ಕೂಡ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು. ಎಲ್ಲರ ಹಿತದೃಷ್ಟಿಯಿಂದ ಪ್ರೇಕ್ಷಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ ಅಂತಾ ಹೇಳಿದೆ.
ಇನ್ನು ಇದೇ ಮಾರ್ಚ್ 12ರಂದು ನಡೆದಿದ್ದ ಮೊದಲನೇಯ ಟಿ20 ಪಂದ್ಯದಲ್ಲಿ 50,000 ಟಿಕೇಟ್‌ಗಳು ಸೋಲ್ಡ್ ಆಗಿದ್ದವು. ಇನ್ನೊಂದು ಆಟದಲ್ಲಿ 65ಸಾವಿರ ಟಿಕೇಟ್‌ಗಳು ಮಾರಾಟಗೊಂಡಿದ್ದವು. ಈ ವೇಳೆ ಪಂದ್ಯ ನೋಡಲು ಬಂದ ಪ್ರೇಕ್ಷಕರು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಧರಿಸದೇ, ಪಂದ್ಯವನ್ನ ಎಂಜಾಯ್ ಮಾಡಿದ್ದಾರೆ. ಇದೇ ಕಾರಣಕ್ಕೆ ಯಾವುದೇ ರೂಲ್ಸ್ ಹಾಕಿದ್ರು ಪ್ರೇಕ್ಷಕರು ಸಾಮಾಜಿಕ ಅಂತರ ಕಾಪಾಡುವುದಾಗಲಿ, ನಿಯಮ ಅನುಸರಿಸುವುದಾಗಲಿ ಮಾಡುವುದಿಲ್ಲ. ಈ ಕಾರಣಕ್ಕೆ ಬಿಸಿಸಿಐ ಮುಂದಿನ ಪಂದ್ಯಕ್ಕೆ ಪ್ರೇಕ್ಷಕರ ಪ್ರವೇಶಕ್ಕೆ ರದ್ದು ಮಾಡಿದೆ.