Saturday, December 6, 2025

Latest Posts

ಬಿಸಿಲಿನ ಬೇಗೆಗೆ ದೇಹ ತಂಪಾಗಲು ಸೇವಿಸಬೇಕಾದ ಆಹಾರಗಳೇನು..?

- Advertisement -

ಬೇಸಿಗೆ ಗಾಲ ಆರಂಭವಾಗಿದೆ. ಮನೆಯಲ್ಲೇ ಸ್ವಲ್ಪ ಹೊತ್ತು ಕೆಲಸ ಮಾಡಿದರೆ, ಮೈ ಎಲ್ಲ ಬೆವರಿ, ಬಾಯಾರಿಕೆಯಾಗುತ್ತದೆ. ಅಂಥದ್ರಲ್ಲಿ ಹೊರಗೆ ಹೋಗಿ ಕೆಲಸ ಮಾಡುವವರ ಪರಿಸ್ಥಿತಿ ಏನಾಗಬೇಡ..? ಆದ್ದರಿಂದ ನಾವಿವತ್ತು ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೇಸಿಗೆಯಲ್ಲಿ ಹಸಿವಿಗಿಂತ ಹೆಚ್ಚು, ಬಾಯಾರಿಕೆಯಾಗುತ್ತದೆ. ಆಗ ನಾವು ಊಟಕ್ಕಿಂತ ಹೆಚ್ಚು ಪೇಯವನ್ನೇ ಸೇವಿಸುತ್ತೇವೆ. ಅದರಲ್ಲೂ ಕೆಲವರಿಗೆ ಐಸ್ ಹಾಕಿದ ಪೇಯವೇ ಬೇಕು. ಆದ್ರೆ ಐಸ್ ಹಾಕಿದ ಪೇಯ ಕುಡಿಯುವುದರಿಂದ ದೇಹ ತಂಪಾಗುವುದಿಲ್ಲ. ಬದಲಾಗಿ ಉಷ್ಣಗೊಳ್ಳುತ್ತದೆ. ಇನ್ನು ಬೇಸಿಗೆಯಲ್ಲಿಯೇ ನಮ್ಮ ಬೆಳವಣಿಗೆ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ನಾವು ಆಹಾರ ಸೇವಿಸುವುದು ತುಂಬಾ ಮುಖ್ಯ.

ನಿಮಗೆ ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ, ಬರೀ ನೀರಿನ ಬದಲು, ಹಣ್ಣಿನ ಜ್ಯೂಸ್, ಎಳನೀರು, ಮಾಲ್ಟ್, ಮಿಲ್ಕ್‌ಶೇಕ್ ಮಾಡಿ ಕುಡಿಯಿರಿ. ಹಸಿವಾದಾಗ ತಂಪಾದ ತಾಜಾ ಹಣ್ಣು, ಮೊಸರನ್ನ, ತಿನ್ನಿ. ರಾಗಿ ಮಾಲ್ಟ್, ರಾಗಿ ಗಂಜಿ, ರಾಗಿ ಮುದ್ದೆ, ಬಾರ್ಲಿ ನೀರು, ಕುಚಲಕ್ಕಿ ಗಂಜಿ ಹೀಗೆ ತಂಪಾದ ಆಹಾರ ಸೇವಿಸಿ.

 ಹಾಗಂತ ಬೇಸಿಗೆಯಲ್ಲಿ ಬರೀ ತಂಪಾದ ಆಹಾರವನ್ನೇ ಸೇವಿಸಬಾರದು. ಯಾಕಂದ್ರೆ ಬರೀ ತಂಪಾದ ಆಹಾರ ಸೇವಿಸುವುದರಿಂದ, ನಮ್ಮ ದೇಹದ ಜೀರ್ಣಕ್ರಿಯೆಯಲ್ಲಿ ಏರುಪೇರಾಗಿ, ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಈ ಸೀಸನ್‌ನಲ್ಲಿ ಸಿಗುವ ಮಾವಿನ ಹಣ್ಣು, ಹಲಸಿನ ಹಣ್ಣಿನ ಸೇವನೆ ಕೂಡ ಮಾಡಿದರೆ ಉತ್ತಮ.   

- Advertisement -

Latest Posts

Don't Miss