ಕಷ್ಟ ಪಟ್ಟರೆ ಒಂದಲ್ಲ ಒಂದು ದಿನ ಸಕ್ಸಸ್ ಸಿಗುತ್ತೆ ಅನ್ನೋಕ್ಕೆ ನಮ್ಮಲ್ಲಿ ಹಲವಾರು ಪ್ರತಿಭೆಗಳೇ ಉದಾಹರಣೆಯಾಗಿದ್ದಾರೆ. ಅದರಲ್ಲಿ ಇಶಾನ್ ಕೂಡಾ ಒಬ್ಬರು. ಕ್ರಿಕೇಟ್ ಲೋಕದಲ್ಲಿ ಮಿಂಚುತ್ತಿರುವ ಇಶಾನ್, ಸದ್ಯ ಎಲ್ಲ ಕ್ರಿಕೇಟ್ ಪ್ರೇಮಿಗಳ ಅಚ್ಚುಮೆಚ್ಚಿನ ಆಟಗಾರ. ಆದ್ರೆ ಇಶಾನ್ ಇಂಥ ದಿನ ಬರುವ ಮುನ್ನ, ಸಾಕಷ್ಟು ಕಷ್ಟ ಪಟ್ಟಿದ್ದು, ಅದರ ಪ್ರತಿಫಲವಾಗಿ ಇಂದು ಇಡೀ ಪ್ರಪಂಚಕ್ಕೆ ಪ್ರಸಿದ್ಧನಾಗುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ.



ಚಿಕ್ಕಂದಿನಿಂದಲೂ ಕ್ರಿಕೇಟ್ನಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಇಶಾನ್ಗೆ ಅಪಪ್ಪ ಅಮ್ಮ ಕೋಚಿಂಗ್ಗಾಗಿ ರಾಂಚಿಗೆ ಕಳುಹಿಸಿಕೊಟ್ಟರು. ಅಲ್ಲಿ ಹಾಸ್ಟೇಲ್ನಲ್ಲಿ ಇದ್ದ ಇಶಾನ್, ರಾತ್ರಿ ಹೊತ್ತು ಊಟವಿಲ್ಲದೇ, ಹಲವಾರು ದಿನ ಪಾಡು ಪಟ್ಟಿದ್ದಾರಂತೆ. ಇಶಾನ್ಗೆ ಅಡುಗೆ ಮಾಡಲು ಬರದ ಕಾರಣ, ಆತ ತನ್ನ ರೂಮ್ ಮೇಟ್ಸ್ ಮಾಡಿದ ಅಡುಗೆಯನ್ನೇ ಊಟ ಮಾಡುತ್ತಿದ್ದ. ಅಡುಗೆ ಕೆಲಸದ ಬದಲಾಗಿ, ಬಾತ್ರೂಂ, ವಾಶ್ರೂಂ ಕ್ಲೀನ್ ಮಾಡುತ್ತಿದ್ದ. ಆದ್ರೆ ಉಳಿದ ರೂಮ್ಮೇಟ್ಸ್ ಕ್ರಿಕೇಟ್ ಆಡಲು ಹೋದಾಗ, ಇಶಾನ್ ಊಟವಿಲ್ಲದೇ ಮಲಗಿದ ದಿನಗಳೂ ಇದೆ.
ಈ ವಿಷಯ ತಿಳಿದ ಪೋಷಕರು ತಾವೇ ರಾಂಚಿಗೆ ಬಂದು, ಬಾಡಿಗೆ ಮನೆ ಪಡೆದಿದ್ದು, ಅಲ್ಲೇ ಇಶಾನ್ ಅಪ್ಪ ಅಮ್ಮನ ಜೊತೆ ಇದ್ದನಂತೆ. ಇಷ್ಟೇ ಅಲ್ಲದೇ ತಮ್ಮ ಮಗ ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದು, ಈ ದಿನ ಬಂದಿದ್ದು ನಮಗೆ ತುಂಬಾ ಸಂತೋಷ ಕೊಟ್ಟಿದೆ ಎಂದು ಇಶಾನ್ ಪೋಷಕರು ಹೇಳುತ್ತಾರೆ.

