ಬೆಂಗಳೂರು : ಕೊರೊನಾ ಜನರ ಜೀವವನ್ನ ಹಿಂಡುತ್ತಿದೆ.. ಇಂದು ಇದ್ದವರು ನಾಳೆ ಇಲ್ಲ.. ಪ್ರತಿದಿನವೂ ಸಾವಿನ ಸುದ್ದಿ ಆಸ್ಪತ್ರೆಗೆ ಹೋದವನು ಮಸಣಕ್ಕೆ ಹೋಗೇಬಿಟ್ಟ ಅನ್ನುವ ಆತಂಕ.. ಈ ಮಹಾಮಾರಿಯನ್ನ ಕಂಟ್ರೋಲ್ ಮಾಡಲು ಸರ್ಕಾರ ಲಾಕ್‌ಡೌನ್ ಮಾಡಿದೆ. ಆದ್ರೆ, ಲಾಕ್ ಡೌನ್ ನಿಂದ ಎಷ್ಟೋಜನರ ಹೊಟ್ಟೆಗೂ ಲಾಖ್ ಬಿದ್ದಿದೆ. ಬೆಂಗಳೂರಿನಲ್ಲಿ ನಿತ್ಯ 5-6 ಲಕ್ಷ ಜನ ಊಟಕ್ಕಾಗಿ ಪರದಾಡುವ ಸ್ಥಿತಿ ಇದೆ.. ಇಂದಿರಾ ಕ್ಯಾಂಟಿನ್ ನಲ್ಲಿ ಉಚಿತ ಊಟ ಕೊಡ್ತಿದ್ರು ಎಲ್ಲರಿಗೂ ಸಾಕಾಗ್ತಿಲ್ಲ.. ಸಾಕಷ್ಟು ದಾನಿಗಳು ಹಸಿವನ್ನ ನೀಗಿಸುವ ಕೆಲಸ ಮಾಡ್ತಿದ್ದಾರೆ. ಕೊವೀಡ್ ಮೊದಲ ಅಲೆಯಲ್ಲಿ ಬಹಳಷ್ಟು ಜನ ಸಹಾಯ ಮಾಡಿದ್ರು. ಆದ್ರೆ ಈ ಬಾರಿ ಕಳೆದಬಾರಿಯಷ್ಟು ಜನ ಸೇವೆಗೆ ಮುಂದಾಗ್ತಿಲ್ಲ.. ಯಾಕಂದ್ರೆ ಕೋವಿಡ್ ಎರಡನೇ ಅಲೆ ತೀವ್ರವಾಗಿ ಜೀವವನ್ನ ಬಲಿ ಪಡೆಯುತ್ತಿರೋದು ಬಹಳಷ್ಟು ಜನ ಹಿಂಜರಿಯುತ್ತಿದ್ದಾರೆ. ಇಂಥಹ ಸನ್ನಿವೇಶದಲ್ಲಿ ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಮಂತ್ರ ಫೌಂಡೇಷನ್ ಮೂಲಕ ಹಸಿವನ್ನ ನೀಗಿಸುವ ಕೆಲಸ ಮಾಡ್ತಿದ್ದಾರೆ..
www.karnatakatv.net ಜೊತೆ ಮಾತನಾಡಿದ ಸ್ವಾತಿ ಚಂದ್ರ ಶೇಖರ್ ಹೇಳಿದ್ದು ಹೀಗೆ
“ಸಾವಿಲ್ಲದ ಮನೆಯಿಂದ ಸಾಸಿವೆ ತರಲಾರೆ, ಕೊರೊನಾ ಇಲ್ಲದ ಮನೆಯಿಂದ ಸಹಾಯ ಬೇಡಲಾರೆ, ಹೌದು ಹೇಗೆ ಬುದ್ಧ ಸಾವಿಲ್ಲದ ಮನೆಯಿಂದ ಸಾಸಿವೆ ತರಲಾರೆ ಎಂದನೋ ಹಾಗೆ, ಕೊರೊನಾ ಯಾರ ಮನೆಯಲ್ಲಿ ಇಲ್ಲವೊ ಅವರಲ್ಲಿ ಮಾತ್ರ ಈ ಕಂದಮ್ಮಗಳಿಗೆ ಉಣಬಡಿಸಲು ಸಹಾಯ ಬೇಡುವೆ ಎಂದು ಹೇಳಲಾರೆ, ಎಲ್ಲರೂ ಸಮಾನ ದುಃಖಿಗಳು ಈ ದುಃಖದ ನಡುವೆಯೂ ಇವರ ಬಗ್ಗೆ ಯೋಚಿಸುವ ಅನಿವಾರ್ಯ ಬಂದಿದೆ. ಬನ್ನಿ ಕೈ ಜೋಡಿಸಿ ಹಸಿವು ಮುಕ್ತ ಭಾರತ ಆಗದೆ ಇದ್ದರೂ ಹಸಿವು ಮುಕ್ತ ಬೆಂಗಳೂರು ಮಾಡಲು ಪ್ರಯತ್ನಿಸೋಣ” – ಪತ್ರಕರ್ತೆ ಸ್ವಾತಿ ಚಂದ್ರಶೇಖರ್
ಈ ಮಕ್ಕಳಿಗೆ ನೀವು ನೆರವಾಗಬೇಕಾದರೆ ಈ ಕೆಳಕಂಡ ಬ್ಯಾಂಕ್ ಮಾಹಿತಿಗೆ ನಿಮ್ಮ ದೇಣಿಗೆ ನೀಡಬಹುದು, ಹಾ… ಬ್ಯಾಂಕ್ ಗೆ ಹಣ ಹಾಕುವ ಮುನ್ನ ನಿಮ್ಮ ಮಾಹಿತಿ ತಪ್ಪದೆ ಈ ಕೆಳಕಂಡ ನಂಬರ್ ಗೆ ಕಳುಹಿಸಿ
By
Swathi Chandrashekar
National Journalist
Co-Founder- Mantra Foundation
9620319292
Account details: A
ccount name: Mantra Foundation
Account number: 50200049390450
IFSC Code: HDFC0002858
Bank Branch: HDFC Bank,
Banashankari 2nd stage
PAN: AAGTM7688G




