www.karnatakatv.net : ಮಾಜಿ ಸಚಿವ ಬಿಜೆಪಿ ಹಿರಿಯ ನಾಯಕ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಪ್ತ ಸಿಎಂ ಉದಾಸಿ ಇಂದು ಮೃತಪಟ್ಟಿದ್ದಾರೆ.. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದ ಉದಾಸಿಯವರ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿತ್ತು.. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.. ಸಿಎಂ ಉದಾಸಿಯವರ ಪುತ್ರ ಶಿವಕುಮಾರ್ ಉದಾಸಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.. ಇನ್ನು 1983ರ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದಿಂದ ಮೊದಲ ಬಾರಿಗೆ ಪಕ್ಷೇತರರಾಗಿ ಆಯ್ಕೆಯಾದ ಉದಾಸಿಯವರು 1995ರಲ್ಲಿ ಜನತಾಪಕ್ಷದಿಂದ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ್ರು.. 1989ರಲ್ಲಿ ಮನೋಹರ್ ತಹಶೀಲ್ದಾರ್ ವಿರುದ್ಧ ಸೋಲು ಕಂಡ ಉದಾಸಿಯವರು ಮತ್ತೆ 1994ರಲ್ಲಿ ಜನತಾದಳದಿಂದ ಮೂರನೆ ಬಾರಿ ಶಾಸಕರಾಗಿ ಆಯ್ಕೆಯಾದ್ರು.. 1999ರಲ್ಲಿ ಜೆಡಿಯುನಿಂದ ಸ್ಪಧರ್ೆ ಮಾಡುವ ಉದಾಸಿಯವರು ಎರಡನೇ ಬಾರಿ ಮನೋಹರ್ ತಹಶೀಲ್ದಾರ್ ವಿರುದ್ಧ ಸೋಲು ಕಾಣ್ತಾರೆ. ಮತ್ತೆ 2003 ಹಾಗೂ 2008ರಲ್ಲಿ ಬಿಜೆಪಿಯಿಂದ ಸ್ಪಧರ್ೆ ಮಾಡುವ ಉದಾಸಿಯವರು ಕ್ರಮವಾಗಿ 4 & 5ನೇ ಬಾರಿ ಶಾಸಕರಾಗ್ತಾರೆ.. 2008ರಲ್ಲಿ ರಚನೆಯಾದ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗುವ ಕಾರ್ಯನಿರ್ವಹಣೆ ಮಾಡ್ತಾರೆ. 2013ರಲ್ಲಿ ಮನೋಹರ್ ತಹಶೀಲ್ದಾರ್ ವಿರುದ್ಧ ಸೋಲು ಕಾಣುವ ಉದಾಸಿಯವರು 2018 ರ ಚುನಾವಣೆಯಲ್ಲಿ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ರು..




