Crime News: ಕೇತನ್ ಹ*ತ್ಯೆ ಮಾಡಲು ಸೀಯಾಗೆ ಮಾದರಿಯಾಗಿದ್ದ ಸೋನಮ್ ರಘುವಂಶಿ

Crime News: ಮದುವೆ ಫಿಕ್ಸ್ ಆಗಿದ್ದ ಹುಡುಗ ಕೇತನ್ ನನ್ನು ಲೋಹಘಡ್ ಫೋರ್ಟ್‌ಗೆ ಕರೆದ“ಯ್ದು ಹತ್ಯೆ ಮಾಡಿದ್ದ ಕೇಸ್‌ನಲ್ಲಿ ಮುಖ್ಯವಾದ ಮಾಹಿತಿ ಲಭ್ಯವಾಗಿದೆ. ಅದೇನೆಂದರೆ, ಸೀಯಾ ಘೋಯಲ್ ಕೇತನ್ ಅಗರ್‌ವಾಲ್‌ನನ್ನು ಹತ್ಯೆ ಮಾಡಲು, ಈ ಹಿಂದಿನ ಪಾತಕಿ ಸೋನಮ್ ರಘುವಂಶಿ ಮಾದರಿಯಾಗಿದ್ದಳಂತೆ.

ಹೌದು, ಪೋಲೀಸರ ತನಿಖೆಯಿಂದ ಈ ವಿಷಯ ಬಯಲಾಗಿದ್ದು, ಸೋನಮ್ ರಘುವಂಶಿ ಕೂಡ ಇದೇ ರೀತಿ ಪ್ರಿಯಕರನಿಗಾಗಿ ಮದುವೆ ಫಿಕ್ಸ್ ಆಗಿದ್ದ ಯುವಕನನ್ನು ಮರ್ಡರ್‌ ಮಾಡಿ ಜೈಲು ಸೇರಿದ್ದಳು. ಆದರೆ ಕೆಲವೇ ದಿನಗಳಲ್ಲಿ ಬೇಲ್ ಪಡೆದು ಮನೆಗೆ ಮರಳಿದ್ದಳು. ಅದೇ ರೀತಿ ಸೀಯಾ ಕೂಡ ಹೀಗೆ ಮರ್ಡರ್‌ ಮಾಡಿದರೆ, ಕೆಲ ದಿನಗಳಲ್ಲೇ ದುಡ್ಡಿನ ಪವರ್‌ನಿಂದ ತಾನೂ ಮನೆಗೆ ಮರಳಬಹುದು ಎಂದು ಐಡಿಯಾ ಮಾಡಿದ್ದಳು.

ರಾಜಾ ರಘುವಂಶಿ ಮರ್ಡರ್ ಪ್ಲಾನ್ ಸರ್ಚ್ ಮಾಡಿದ್ದ ಸೀಯಾ..

ಸೀಯಾ ಘೋಯಲ್ ಕೇತನ್ ಅಗರ್ವಾಲ್‌ನನ್ನು ಮರ್ಡರ್ ಮಾಡಲು ಪ್ರಿಯಕರ ಚೇತನ್ ಸಹಾಯ ಪಡೆದಿದ್ದಳು. ಅಲ್ಲದೇ ಈ ಹಿಂದೆ ನಡೆದಿದ್ದ ರಾಜಾ ರಘುವಂಶಿ ಹತ್ಯೆ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಸರ್ಚ್ ಮಾಡಿ, ಮಾಹಿತಿ ಸಂಗ್ರಹಿಸಿದ್ದಳು. ಅಲ್ಲದೇ ಸೋನಮ್ ಮಾಡಿದ ತಪ್ಪುಗಳನ್ನು ತಾನು ಮಾಡಬಾರದೆಂದು ನಿಗಾ ಕೂಡ ವಹಿಸಿದ್ದಳು. ಮರ್ಡರ್‌ ಮಾಡಿ, ಏನು ತಿಳಿಯದವರಂತೆ ಎಸ್ಕೇಪ್ ಆಗಲು ಪ್ರಯತ್ನ ಕೂಡ ನಡೆಸಿದ್ದಳು.

ಆದರೆ ಸೀಯಾಳ ಯಾವ ಪ್ಲಾನ್ ಕೂಡ ವರ್ಕ್ ಆಗದೇ, ಸದ್ಯ ಆಕೆ ಮತ್ತು ಆಕೆಯ ಪ್ರಿಯಕರನ ಬಂಧನವಾಗಿದೆ. ಇತ್ತ ಪುತ್ರ ಕೇತನ್ ಅಗರ್ವಾಲ್‌ನನ್ನು ಕಳೆದುಕ“ಂಡ ದುಃಖದಲ್ಲಿದ್ದ ಆತನ ತಂದೆಗೆ ಇನ್ನ“ಂದು ಆಘಾತ ಎದುರಾಗಿದ್ದು, ಕೇತನ್ ತೀರಿಹೋದ ಕೆಲ ದಿನಗಳಲ್ಲೇ ಆತ ಅಜ್ಜ ಕೂಡ ತೀರಿಹೋಗಿದ್ದಾರೆ.

ಆಗಿದ್ದೇನು..?

ದೇ ನವೆಂಬರ್‌ನಲ್ಲಿ ಸಿಯಾ ಮತ್ತು ಕೇತನ್ ಮದುವೆ ನಿಗದಿಯಾಗಿತ್ತು. ರಾಜಸ್ತಾನದ ಅರಮನೆಯಲ್ಲಿ ಮದುವೆಗೆ ಸಿದ್ಧತೆ ನಡೆದಿದ್ದು, 17 ಕೋಟಿ ರೂಪಾಯಿ ಬಾಡಿಗೆಯೂ ನೀಡಲಾಗಿತ್ತು. ಆದರೆ ತನಗೆ ಈ ಮದುವೆ ಭಾರೀ ಇಷ್ಟವಾಗಿದೆ ಎಂಬಂತೆ ನಟಿಸಿದ್ದ ಸಿಯಾ ತನ್ನ ಪ್ರೀತಿ ಬಗ್ಗೆ ಮನೆಯಲ್ಲೂ ಹೇಳದೇ, ಕೇತನ್ ಬಳಿಯೂ ಹೇಳದೇ ನಾಟವಾಡಿದ್ದಳು. ಹತ್ಯೆಗೆ ಸಂಚು ರೂಪಿಸಿದ್ದಳು.

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ನೆಪದಲ್ಲಿ ಕೇತನ್‌ನನ್ನೂ ಚೇತನ್‌ನನ್ನೂ 1 ಸ್ಥಳಕ್ಕೆ ಕರೆಸಿ, ಚೇತನ್ ಸಹಾಯದಿಂದ ಕೇತನ್‌ನ್ನು ಬೆಟ್ಟದಿಂದ ನೂಕಿ, ಹತ್ಯೆಯೂ ಮಾಡಿದ್ದಳು. ಬಳಿಕ ಇದು ಹತ್ಯೆಯಲ್ಲ, ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದು ಅನ್ನೋ ರೀತಿ ಕಥೆ ಕಟ್ಟಿದ್ದಳು. ಆದರೆ ಪೋಲೀಸರು ಈ ಕೇಸ್ ಬೇಧಿಸಿ, ಇದು ಹತ್ಯೆ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ. ಅಲ್ಲದೇ ಸೀಯಾ ಮತ್ತು ಚೇತನ್ ತಾವು ಹತ್ಯೆ ಮಾಡಿರುವುದು ಸತ್ಯ ಎಂದು ಒಪ್ಪಿಕ“ಂಡಿದ್ದಾರೆ.

ಇದೀಗ ಆಕೆಯ ಬರ್ತ್‌ಡೇಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಬೇಕು ಎಂಬ ಕಾರಣಕ್ಕೆ, ಕೇತನ್ ತಂದೆ ಮಹಾಬಲೇಶ್ವರ್‌ದಲ್ಲಿ 70 ರೂಮ್ ಬುಕ್ ಮಾಡಿದ್ದರು. ಜೂನ್ 20ಕ್ಕೆ ಸೀಯಾ ಬರ್ತ್‌ಡೇ ಇತ್ತು. ಹೀಗಾಗಿ ಸಂಬಂಧಿಕರ ಜತೆ ಈ ಬರ್ತಡೇ ಮಾಡಿ, ಆಕೆಯ ಬರ್ತ್‌ಡೆ ಸ್ಪೆಶಲ್ ಮಾಡಬೇಕು ಎಂದು ಕೇತನ್ ತಂದೆ, ವಿಶಾಲ್ ಅಗರ್ವಾಲ್ ನಿರ್ಧರಿಸಿದ್ದರಂತೆ.

ಆದರೆ ಪಾರ್ಟಿ ಎಲ್ಲಾ ಬೇಡಾ, ನಾವಿಬ್ಬರೇ ಪ್ರಿ ವೆಡ್ಡಿಂಗ್ ಫೋಟೋ ಶೂಟ್‌ಗೆ ಟ್ರೆಕಿಂಗ್ ಹೋಗೋಣವೆಂದು ಸೀಯಾ ಕೇತನ್‌ಗೆ ಹೇಳಿ, ಹೇಗೋ ಪ್ಲಾನ್ ಸಕ್ಸಸ್‌ ಆಗುವಂತೆ ಮಾಡಿದ್ದಳು. ಬಳಿಕ ಅಲ್ಲಿ ಕೇತನ್ ಹತ್ಯೆ ನಡೆದಿತ್ತು.

About The Author