Friday, December 27, 2024

Latest Posts

ಅಕ್ಟೋಬರ್ 17ರಿಂದ T20 ವಿಶ್ವಕಪ್ ಆರಂಭ

- Advertisement -

www.karnatakatv.net: ಕ್ರಿಕೆಟ್: ದುಬೈ- ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ, ಈಗಾಗಲೇ ಟಿ-20 ವಿಶ್ವಕಪ್ ದುಬೈಗೆ ಶಿಫ್ಟ್ ಆಗಿದೆ. ಇದೀಗ ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ನಡೆಯಲಿದೆ ಎಂದು ಐಸಿಸಿ(ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಖಚಿತ ಪಡಿಸಿದೆ. ಈ ಬಾರಿ ಯುಎಇ ಮತ್ತು ಒಮಾನ್ ನಲ್ಲಿ ಟಿ-20 ವಿಶ್ವಕಪ್ 2021 ನಡೆಯಲಿದೆ ಎಂದು ಬಿಸಿಸಿಐ ತಿಳಿಸಿತ್ತು. ಇದರ ಬೆನ್ನಲ್ಲೇ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ದಿನಾಂಕವನ್ನ ಖಚಿತ ಪಡಿಸಿದೆ. ಇನ್ನು, ಭಾರತದಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಕೂಡಾ ದುಬೈನಲ್ಲಿ ನಡೆಯಲಿದೆ ಎಂದು ಈ ಹಿಂದೆ ಬಿಸಿಸಿಐ ಘೋಷಿಸಿತ್ತು. ಸದ್ಯ ಟಿ-20 ಟೂರ್ನಿ ಕೂಡ ಯುಎಇಗೆ ಸ್ಥಳಾಂತರ ಮಾಡಬೇಕೆಂದು ತೀರ್ಮಾನಿಸಿ ಮಾಹಿತಿ ಖಚಿತಪಡಿಸಿದೆ.

- Advertisement -

Latest Posts

Don't Miss