- Advertisement -
www.karnatakatv.net: ರಾಷ್ಟ್ರೀಯ- ನವದೆಹಲಿ: ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಈ ಮಧ್ಯೆ ತೈಲ ಕಂಪನಿಗಳು ಜನಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಿದೆ. ಎಲ್ ಪಿಜಿ ಸಿಲಿಂಡರ್ ಗಳ ಬೆಲೆ 25 ರೂ.ಹೆಚ್ಚಿಸಿದ್ದು, ಪರಿಷ್ಕೃತ ದರದಂತೆ ದೆಹಲಿಯಲ್ಲಿ ಸಿಲಿಂಡರ್ ದರ 834.50 ರೂ.ಗೆ ಏರಿಕೆಯಾಗಿದೆ. ಕಳೆದ 6 ತಿಂಗಳಲ್ಲಿ ಎಲ್ ಪಿಜಿ ಬೆಲೆ 14.2 ಕೆಜಿ ಸಿಲಿಂಡರ್ ಗೆ 140 ರೂ.ಹೆಚ್ಚಳವಾಗಿದೆ.
ದೇಶದ ಮಹಾನಗರಗಳಲ್ಲಿ ಎಲ್ ಪಿಜಿ ಸಿಲಿಂಡರ್ ದರ ಹೀಗಿದೆ…
ಮುಂಬಯಿಯಲ್ಲಿ 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 809 ರೂಪಾಯಿ ಇದ್ದಿದ್ದು, ಈಗ 834.50 ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 812 ರೂಪಾಯಿ ಇದ್ದಿದ್ದು, ಈಗ 836.50ರೂಪಾಯಿಗೆ ಹೆಚ್ಚಳವಾಗಿದೆ. ಕೋಲ್ಕತ್ತಾದಲ್ಲಿ 835.50ರೂ ಇದ್ದಿದ್ದು, ಈಗ 861 ರೂಪಾಯಿಗೆ ಏರಿಕೆಯಾಗಿದೆ.
- Advertisement -