- Advertisement -
www.karnatakatv.net: ರಾಷ್ಟ್ರೀಯ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಸ್ಥಳದಲ್ಲಿ ಭರದ ಕಾಮಗಾರಿ ನಡೆಯುತ್ತಿದೆ. ಅವಶೇಷಗಳನ್ನ ಸ್ವಚ್ಛಗೊಳಿಸಿ, ಕಾಂಕ್ರೀಟ್ ಹಾಕಲು ನೆಲವನ್ನು ಸಮತಟ್ಟು ಮಾಡುಲ ಕೆಲಸ ನಡೆಯುತ್ತಿರುವುದು ಸೆಟಲೈಟ್ ಫೋಟೋದಿಂದ ಕಾಣುತ್ತದೆ. ತಜ್ಞರ ಸಲಹೆಯಂತೆ ಮಂದಿರಕ್ಕೆ ಅಡಿಪಾಯ ಹಾಕುವಾಗ ಹೆಚ್ಚುವರಿಯಾಗಿ ಕಾಂಕ್ರೀಟ್ ಪದರಗಳನ್ನ ಹಾಕಲು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಂಬಂಧಪಟ್ಟ ಇಂಜಿನಿಯರ್ ಗಳಿಗೆ ಸೂಚಿಸಿದೆ. 1,20,000 ಚದರ ಅಡಿ ಪ್ರದೇಶದಲ್ಲಿ 40-45 ಪದರ ಕಾಂಕ್ರೀಟ್ ಹಾಕಲಾಗಿದ್ದು, ಅದರಲ್ಲಿ 4 ಲೇಯರ್ಗಳಷ್ಟೇ ಮುಗಿದಿದೆ ಎಂದೂ ಟ್ರಸ್ಟ್ ಮೇ 31ರಂದು ಮಾಹಿತಿ ನೀಡಿತ್ತು. ಅಕ್ಟೋಬರ್ ಅಷ್ಟೊತ್ತಿಗೆ 45 ಪದರಗಳ ಕಾಂಕ್ರೀಟ್ ಹಾಕುವ ಕೆಲಸ ಮುಗಿಯಬಹುದು ಎಂದೂ ಟ್ರಸ್ಟ್ ತಿಳಿಸಿದೆ. ಇಲ್ಲಿದೆ ನೋಡಿ ಸೆಟಲೈಟ್ ಮೂಲಕ ಸೆರೆ ಹಿಡಿಯಲಾದ ಶ್ರೀರಾಮಮಂದಿರ ಸ್ಥಳದ ಚಿತ್ರ…
- Advertisement -