www.karnatakatv.net ಇಡೀ ಭಾರತೀಯ ಚಿತ್ರರಂಗವೇ ಎದುರುನೋಡ್ತಿರುವ ಕನ್ನಡದ ಮಹೋನ್ನತ ಸಿನಿಮಾ ಕೆಜಿಎಫ್ ಚಾಪ್ಟರ್-2. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚಿತ್ರವನ್ನು ತೆರೆಗೆ ತಂದು ವಲ್ಡ್ ವೈಡ್ ಸುನಾಮಿ ಎಬ್ಬಿಸಿರುವ ಕೆಜಿಎಫ್ ಚಿತ್ರದ ಪಾರ್ಟ್2ನ ಕಣ್ತುಂಬಿಕೊಳ್ಳೋದಕ್ಕೆ ಜಾತಕಪಕ್ಷಿಯಂತೆ ಕಾದುಕುಳಿತಿದ್ದಾರೆ.ಪ್ರೇಕ್ಷಕ ಮಹಾಷಯರನ್ನು ಚಿನ್ನದ ಸಾಮ್ರಾಜ್ಯಕ್ಕೆ ಕರೆದೊಯ್ಯಲಿಕ್ಕೆ ಚಿತ್ರತಂಡ ಕೂಡ ಸಿದ್ದತೆ ಮಾಡಿಕೊಳ್ತಿದೆ. ಈ ಹೊತ್ತಲ್ಲಿ ಕೆಜಿಎಫ್ ಚಾಪ್ಟರ್-2 ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲಾಗಿದೆ. ಬಿಡುಗಡೆಗೆ ಮುನ್ನವೇ ನಯಾ ದಾಖಲೆ ಬರೆದು ಸೆನ್ಸೇಷನ್ ಸೃಷ್ಟಿಸಿದೆ. ಹೌದು, ಖ್ಯಾತ ಮ್ಯೂಸಿಕ್ ಸಂಸ್ಥೆಯಾದ ಲಹರಿ ಕಂಪೆನಿ ಕೆಜಿಎಫ್ ಚಾಪ್ಟರ್-2 ಆಡಿಯೋ ಹಕ್ಕನ್ನು 7.2 ಕೋಟಿ ಕೊಟ್ಟು ಖರೀದಿ ಮಾಡಿದೆ. ಐದು ಭಾಷೆಗಳ ಆಡಿಯೋ ರೈಟ್ಸ್ ಲಹರಿ ಪಾಲಾಗಿದೆ. ಈ ಹಿಂದೆ ಕೆಜಿಎಫ್ ಚಾಪ್ಟರ್-1 ಆಡಿಯೋ ರೈಟ್ಸ್ನ 3.6 ಕೋಟಿ ಕೊಟ್ಟು ಲಹರಿ ಸಂಸ್ಥೆ ಖರೀದಿ ಮಾಡಿತ್ತು. ಇದೀಗ ಅದಕ್ಕಿಂತ ಡಬಲ್ ಅಮೌಂಟ್ ಕೊಟ್ಟು ಕೆಜಿಎಫ್ ಚಾಪ್ಟರ್ 2 ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ತಮ್ಮದಾಗಿಸಿಕೊಂಡಿದೆ. ರವಿಬಸ್ರೂರ್ ಸಂಗೀತ ಸಂಯೋಜನೆಯಲ್ಲಿ ಬೆಂಕಿ ಬಿರುಗಾಳಿಯಂತಹ ಸುನಾಮಿ ಸುಂಟರಗಾಳಿಯಂತಹ ಹಾಡುಗಳು ತಯ್ಯಾರಾಗಿವೆ. ಶೀಘ್ರದಲ್ಲೇ ಕೆಜಿಎಫ್ ಪಾರ್ಟ್2 ನ ಹಾಡುಗಳು ಲಹರಿ ಸಂಸ್ಥೆಯಿದ ದಿಬ್ಬಣ ಹೊರಡಲಿವೆ. ರತ್ನಗಂಬಳಿ ಹಾಕಿ ಬರಮಾಡಿಕೊಳ್ಳೋದಕ್ಕೆ ಸಕಲರೂ ಸಜ್ಜಾಗಿ