www.karnatakatv.net : ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾದ ಭಾರತ ತಂಡ ಜುಲೈ 20 ರಂದು ನಡೆಯಲಿರುವ 2ನೇ ಏಕದಿನ ಪಂದ್ಯ ಸರಣಿ ಜೀವಂತವಾಗಿಡಲು ಈ ಪಂದ್ಯವನ್ನು ಗೆಲ್ಲಲೆಬೇಕಿದೆ 1-0 ಮುನ್ನಡೆ ಸಾಧಿಸಿರುವ ಭಾರತದ ಯುವ ತಂಡ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 262 ರನ್ ದಾಖಲಿಸಿತು. ಇದು ನಿಧಾನಗತಿಯ ಪಿಚ್ ಆಗಿದ್ದರೂ ಮತ್ತು ಸ್ಪಿನ್ನರ್ ಗಳಿಗೆ ಸಹಾಯ ಮಾಡಿದರೂ ಬ್ಯಾಟಿಂಗ್ ಮಾಡಲು ಉತ್ತಮವಾಗಿದೆ. ಚಮಿಕಾ ಕರುಣರತ್ನೆ ಲಂಕಾದ ಪರ 8 ನೇ ಸ್ಥಾನದಲ್ಲಿ ಕಣಕ್ಕಿಳಿದು 35 ಬಾಲ್ ಎದುರಿಸಿ 43 ರನ್ ಗಳಿಸಿದರು. ಕ್ಯಾಪ್ಟನ್ ದಾಸುನ್ ಶಾನಕಾ 50 ಎಸೆತಗಳಲ್ಲಿ 39 ರನ್ ಗಳಿಸಿದರು.
ಭಾರತದ ಪರ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಬಹಳ ಸಮಯದ ನಂತರ ಒಟ್ಟಿಗೆ ಆಡಿದರು. ಇಬ್ಬರೂ ಸ್ಪಿನ್ನರ್ಗಳು ತಲಾ ಎರಡು ವಿಕೆಟ್ ಪಡೆದರು. ಪೇಸರ್ ದೀಪಕ್ ಚಹರ್ ಅವರ ಹೆಸರಿಗೆ ಎರಡು ವಿಕೆಟ್ಗಳು ಸೇರಿದವು. ಲಂಕಾ ಟಾರ್ಗೆಟ್ ಗೆ ಉತ್ತರಿಸಿದ ಭಾರತದ ಪರ ಪೃಥ್ವಿ ಶಾ (24 ಕ್ಕೆ 43) ಭಾರತಕ್ಕೆ ಮಿಂಚಿನ ಆರಂಭವನ್ನು ನೀಡಿದರು. ನಂ 3 ರಲ್ಲಿ ಬ್ಯಾಟಿಂಗ್ಗೆ ಇಳಿದ ಇಶಾನ್ ಕಿಶನ್ 42 ಎಸೆತಗಳಲ್ಲಿ 59 ರನ್ ಗಳಿಸಿ ಚೇಸ್ ಅನ್ನು ಸುಲಭದ ಕೆಲಸವನ್ನಾಗಿ ಮಾಡಿದರು. ಮನೀಶ್ ಪಾಂಡೆ 40 ಎಸೆತಗಳನ್ನು ಎದುರಿಸಿ 26 ರನ್ ಗಳಿಸಿದರು. ನಾಯಕ ಶಿಖರ್ ಧವನ್ (95 ಎಸೆತ 86 ರನ್) ಮತ್ತು ಸೂರ್ಯಕುಮಾರ್ ಯಾದವ್ (20 ಎಸೆತ 31 ರನ್) ಅಜೇಯರಾಗಿ ಉಳಿದರು. ಈಗ ಸರಣಿಯನ್ನು ಜೀವಂತವಾಗಿಡಲು ಶ್ರೀಲಂಕಾ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.