Wednesday, October 15, 2025

Latest Posts

ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸುಲಭದ ಮಾತಲ್ಲ..

- Advertisement -

www.karnatakatv.net : ರಾಯಚೂರು :ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸುಲಭದ ಮಾತಲ್ಲ ಎಂದು  ರಂಭಾಪುರಿ ಶ್ರೀಗಳು ಕೇಂದ್ರ ಸರ್ಕಾರ ಕ್ಕೆ ಎಚ್ಚರಿಕೆ ನೀಡಿದರು .ಜಗದ್ಗುರು ರಂಭಾಪುರಿ ಶ್ರೀಗಳು ರಾಯಚೂರಿನ ಜಿಲ್ಲೆಯ  ಸಿರವಾರ ತಾಲ್ಲೂಕಿನ ನವಲಕಲ್ ಮಠದಲ್ಲಿ  ಮಾದ್ಯಮ ಜೊತೆ ಮಾತನಾಡಿ  ವೀರಶೈವ ಮಾತ್ರವಲ್ಲದೆ ಎಲ್ಲಾ ಸಮುದಾಯದ ಮಠಾಧೀಶರು ಕೇಳುವುದು ಒಂದೇ,

ಮಧ್ಯಂತರದಲ್ಲಿ ಸ್ಥಾನಪಲ್ಲಟ ಮಾಡುವುದು ಒಳ್ಳೆಯದಲ್ಲ ಅನ್ನೋ ಧ್ವನಿ ಕೇಳಿ ಬರುತ್ತಿದೆ.

ಆದ್ರೆ ಕೆಲವರು ಹೊಸ ನಾಯಕರ ಆಯ್ಕೆ ಮಾಡಬೇಕು ಅನ್ನೋ ಹಠದಲ್ಲಿದ್ದಾರೆ.ಏನೇ ಇದ್ರೂ ಬಿಜೆಪಿ ಕೇಂದ್ರ ನಾಯಕರು ನಿರ್ಧಾಕ್ಷಿಣ್ಯವಾಗಿ ನಿರ್ಧಾರ ಹೇಳಬೇಕು.

ಪರಸ್ಥಿತಿ ಹದಗೆಟ್ಟರು ನಾಯಕರು ಸ್ಪಷ್ಟವಾಗಿ ಹೇಳದಿರುವುದು ಜನರಿಗೆ ನೋವಿನ ಸಂಗತಿ.

ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಇದನ್ನ ಸರಿಪಡಿಸುವಲ್ಲೆ ಕಾಲಹರಣ ನಡೆದಿದೆ.ಒಂದು ವೇಳೆ ಕೆಳಗಿಳಿಸಿದರೆ ಕೇಂದ್ರದ ನಾಯಕರು ಅಗ್ನಿಪರೀಕ್ಷೆ ಎದುರಿಸಬೇಕಾಗುತ್ತೆ.ಏನೆಲ್ಲಾ ಪೈಪೋಟಿ ನಡೆಯಬಹುದು, ಯಾವೆಲ್ಲಾ ಸಮುದಾಯದ ಯಾವರೀತಿ ಪ್ರತಿಕ್ರಿಯಿಸಿಬಹುದು. ಪೂರ್ವಾಪರ ಯೋಚಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಪ್ರಕಟಿಸಬೇಕು.

- Advertisement -

Latest Posts

Don't Miss