www.karnatakatv.net : ಹುಬ್ಬಳ್ಳಿ: ಲಾಕ್ ಡೌನ್ ಆಗಿ ಕೆಲವೊಂದು ಮಾರ್ಗದ ರೈಲು ಸಂಚಾರ ಏನೋ ಸ್ಥಗಿತಗೊಂಡಿತು. ಆದರೆ ಈಗ ಅನ್ ಲಾಕ್ ಆಗಿ ರೈಲ್ವೆ ಸಂಚಾರ ಪ್ರಾರಂಭವಾಗಿದೆ. ಆದರೂ ಕೂಡ ರೈಲ್ವೆ ನಿಲ್ದಾಣದ ಎಸ್ಕಿಲೇಟರ್ ಮಾತ್ರ ಆರಂಭವಾಗಿಲ್ಲ.
ಹೌದು.. ನೈಋತ್ಯ ರೈಲ್ವೆ ಹುಬ್ಬಳ್ಳಿಯು ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಹೊಂದಿದ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಇಲ್ಲಿ ಮಾತ್ರ ವೃದ್ಧರು, ಅಂಗವಿಕಲರು ಎಸ್ಕಿಲೇಟರ್ ವ್ಯವಸ್ಥೆಯಿಂದ ವಂಚಿತರಾಗಿ ಮೆಟ್ಟಿಲು ಹತ್ತಿಕೊಂಡು ಒಂದು ಪ್ಲಾಟ್ ಫಾರಂನಿಂದ ಇನ್ನೊಂದು ಪ್ಲಾಟ್ ಫಾರಂಗೆ ಹೋಗಬೇಕಾಗಿದೆ.
ದಿನಕ್ಕೆ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುವ ನೈಋತ್ಯ ರೈಲ್ವೆ ವಲಯದಲ್ಲಿ ಇಂತಹದೊಂದು ಅವ್ಯವಸ್ಥೆ ತಲೆದೂರಿರುವುದು ನಿಜಕ್ಕೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಸಾಕಷ್ಟು ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ಜನಮನ್ನಣೆ ಪಡೆದಿರುವ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಈ ಸಮಸ್ಯೆಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಎಸ್ಕಿಲೇಟರ್ ಆರಂಭ ಮಾಡಬೇಕಿದೆ.




