Wednesday, April 23, 2025

Latest Posts

2ನೇ ಏಕದಿನ ಪಂದ್ಯವನ್ನು ಗೆದ್ದು ರೋಚಕವಾಗಿ ಸರಣಿ ವಶಪಡೆಸಿಕೊಂಡ ಭಾರತದ ಯುವ ಪಡೆ

- Advertisement -

www.karnatakatv.net : ದೀಪಕ್ ಚಹಾರ್ ಹಾಗೂ ಸೂರ್ಯಕುಮಾರ್ ಭರ್ಜರಿ ಆಟದ ಪರಿಣಾಮ ಭಾರತ ಲಂಕಾ ವಿರುದ್ಧದ 2 ನೇ ಏಕದಿನ ಪಂದ್ಯವನ್ನು ಗೆದ್ದಿದೆ. ಪಂದ್ಯದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಳ್ತು. ಬಳಿಕ ಮಿಡಲ್​ ಓವರ್​ಗಳಲ್ಲಿ ರನ್​ರೇಟ್​​ ಕುಸಿತ ಕಂಡಿತಾದ್ರು, ಅಂತಿಮ ಓವರ್​​ಗಳಲ್ಲಿ ವೇಗವಾಗಿ ರನ್​ ಕಲೆ ಹಾಕಿತು. ಈ ಮೂಲಕ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 275 ರನ್​ ಗಳಿಸಿತು.

ಕಳೆದ ಪಂದ್ಯದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದ್ದ ಪೃಥ್ವಿ ಶಾ ಹಾಗೂ ಇಶಾನ್​ ಕಿಶಾನ್ ಈ ಪಂದ್ಯದಲ್ಲಿ ಬೇಗನೇ ವಿಕೆಟ್​ ಒಪ್ಪಿಸಿದ್ರು. ಧವನ್ ಹಾಗೂ ಮನೀಷ್ ಪಾಂಡೆ ಕೂಡ ಹೆಚ್ಚು ಸಮಯ ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಈ ವೇಳೆ ಅರ್ಧ ಶತಕ ಸಿಡಿಸಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಆಸರೆಯಾದ್ರು.

ಸೂರ್ಯ ಕುಮಾರ್ ಔಟ್​ ಬಳಿಕ ತಂಡ ಸೋಲೋ ಸಾಧ್ಯತೆ ಸೃಷ್ಟಿಯಾಗಿತ್ತು. ಆದ್ರೆ ಸಮಯೋಚಿತ 69 ರನ್​ಗಳಿಸಿದ ದೀಪಕ್ ಚಾಹರ್ ಟೀಮ್ ಇಂಡಿಯಾಕ್ಕೆ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ಸರಣಿಯನ್ನೂ ಗೆದ್ದುಕೊಂಡಿದೆ.

https://www.youtube.com/watch?v=JTXgd24T9cc

- Advertisement -

Latest Posts

Don't Miss