Sunday, November 16, 2025

Latest Posts

ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ

- Advertisement -

www.karnatakatv.net: ಕೊರೊನಾ ದಿಂದ ಎಲ್ಲಾ ಕ್ಷೇತ್ರಗಳು ಲಾಕ್ ಆಗಿದ್ದು ಅದರಲ್ಲೂ  ವಿಮಾನಯಾನ ಕೂಡ ಒಂದು. ಮೊದಲ ಅಲೆ ಬಳಿಕ ಪುನರ್ ಆರಂಭಗೊಂಡಿದ್ದ ವಿಮಾನ ಸೇವೆ 2ನೇ ಅಲೆಯಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. 2021ರಲ್ಲಿ ಕೆಲವೇ ತಿಂಗಳು ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಿದೆ.

ಇದರ ಆಧಾರದಲ್ಲಿ ಇದೀಗ ಈ ವರ್ಷದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟಗೊಂಡಿದೆ. ಇದರಲ್ಲಿ ಖತಾರ್ ಏರ್ವೇಸ್ ಮೊದಲ ಸ್ಥಾನ ಪಡೆದುಕೊಂಡಿದೆ.
ವಿಶ್ವದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟ 2021ರ ಬೆಸ್ಟ್ ಏರ್ಲೈನ್ಸ್; ಖತಾರ್ ಏರ್ವೇಸ್ಗೆ ಮೊದಲ ಸ್ಥಾನ ಏರ್ಲೈನ್ಸ್ ರೇಟಿಂಗ್ ಸಂಸ್ಥೆಯಿಂದ ಬೆಸ್ಟ್ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟವಾಗಿದೆ

ಕಳೆದ ವರ್ಷ ಏರ್ ನ್ಯೂಜಿಲೆಂಡ್ ಮೊದಲ ಸ್ಥಾನ ಅಲಂಕರಿಸಿತ್ತು. ಇದೀಗ ಖತಾರ್ ಏರ್ವೇಸ್ ಅಗ್ರಸ್ಥಾನ ಪಡೆದುಕೊಂಡಿದೆ. ಏರ್ಲೈನ್ಸ್ ರೇಟಿಂಗ್ . ಪ್ರತಿ ವರ್ಷ ವಿಮಾನ ಸೇವೆ, ಸುರಕ್ಷತೆ ಸೇರಿದಂತೆ ಹಲವು ಮಾನದಂಡಗಳನ್ನಿಟ್ಟು ರೇಟಿಂಗ್ ನೀಡುತ್ತಿದೆ. ಈ ರೀತಿ ಅತ್ಯುತ್ತಮ 20 ವಿಮಾನಯಾನ ಸಂಸ್ಥೆಗಳನ್ನು ಪ್ರಕಟಿಸಲಾಗಿದೆ. ಟಾಪ್ 20 ಪಟ್ಟಿಯಲ್ಲಿ ಕಾಣಿಸಿಕೊಂಡ ವಿಮಾನಯಾನ ಸಂಸ್ಥೆಗಳು 7 ಸ್ಟಾರ್ ರೇಟಿಂಗ್ ಪಡೆದಿರಬೇಕು. ವಿಮಾನ ಸೇವೆಯಲ್ಲಿನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.


- Advertisement -

Latest Posts

Don't Miss