Saturday, July 12, 2025

Latest Posts

ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ತಿರುಮೂರ್ತಿಯವರು ವಹಿಸಿಕೊಂಡಿದ್ದಾರೆ

- Advertisement -

www.karnatakatv.net : ವೊಲ್ಕನ್‌ ಬೋಜ್ಕಿರ್‌ ಅವರು ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರೊಂದಿಗೆ ಬುಧವಾರ ವೈಯಕ್ತಿಕವಾಗಿ ಸಮನ್ವಯ ಸಭೆ ನಡೆಸಿದರು. ಆಗಸ್ಟ್‌ನಲ್ಲಿ ನಡೆಯಲಿರುವ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ತಿರುಮೂರ್ತಿ ಅವರು ವಹಿಸಲಿದ್ದಾರೆ.

ಮುಂದಿನ ತಿಂಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಲಿರುವ ಭಾರತ ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ವೊಲ್ಕನ್‌ ಬೋಜ್ಕಿರ್‌ ಪ್ರಶಂಸಿಸಿದ್ದಾರೆ.

ತಿರುಮೂರ್ತಿಯವರು, ಮಂಡಳಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಭಾರತದ ಕೈಗೊಳ್ಳಲಿರುವ ಕಾರ್ಯಕ್ರಮಗಳನ್ನು ಬೋಜ್ಕಿರ್‌ಗೆ ವಿವರಿಸಿದರು. ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ 76 ನೇ ಅಧಿವೇಶನದ ಸಿದ್ಧತೆ ಕುರಿತು ಕೂಡ ತಿರುಮೂರ್ತಿ ಮತ್ತು ಬೋಜ್ಕಿರ್‌ ಚರ್ಚಿಸಿದರು.

- Advertisement -

Latest Posts

Don't Miss