Wednesday, September 11, 2024

Latest Posts

ಶಾಲಾ ಆರಂಭಕ್ಕೆ ಅಂತಿಮ ನಿರ್ಧಾರ

- Advertisement -

www.karnatakatv.net : ರಾಜ್ಯದಲ್ಲಿ ಶಾಲೆ ಆರಂಭದ ವಿಚಾರವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಹತ್ವದ ಮಾಹಿತಿ ನೀಡಿದ್ದು, ಶಾಲೆ ಆರಂಭದ ವಿಚಾರವಾಗಿ ಎರಡು ದಿನಗಳಲ್ಲಿ ಆಯುಕ್ತರ ವರದಿ ಕೈಸೇರಲಿದ್ದು, ವರದಿ ಬಂದ ಬಳಿಕ ಶಾಲೆ ಆರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತಂತೆ ಶಿಕ್ಷಣ ಇಲಾಖೆ ಆಯುಕ್ತರು ಇನ್ನೆರಡು ದಿನದಲ್ಲಿ ವರದಿ ಸಲ್ಲಿಸಲಿದ್ದಾರೆ. ವರದಿ ಸಲ್ಲಿಸಿದ ಬಳಿಕ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಆಗಸ್ಟ್ ನಿಂದ ಹಂತ ಹಂತವಾಗಿ 10,12 ನೇ ತರಗತಿ ನಂತರ 8,9 ಮತ್ತು 11 ನೇ ತರಗತಿ ಆರಂಭಿಸುವುದು ಬಳಿಕ 5,6 ಮತ್ತು 7 ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಿಸುವ ಕುರಿತು ರಾಜ್ಯಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ

- Advertisement -

Latest Posts

Don't Miss