ನದಿಯಂತಾಗಿ ಪರಿವರ್ತನೆಗೊಂಡ ಎನ್ಎಚ್4

www.karnatakatv.net : ಬೆಳಗಾವಿ:  ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ಹಗಲು ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ ಆದರೆ ಇವತ್ತು ಬೆಳಗಿನ ಜಾವಾ ಬೆಳಗಾವಿ ತಾಲೂಕಿನ ಸುತಗಟ್ಟಿ ಕ್ರಾಸ್ ಬಳಿಯ ಎನ್ಎಚ್ 4 ರಾಷ್ಟ್ರೀಯ ಹೆದ್ದಾರಿ ಮತ್ತು ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ರಸ್ತೆಗಳು ಸಹ ಸಂಪೂರ್ಣ ಜಲಾವೃತಗೊಂಡಿವೆ.

ಕಳೆದ ಎರಡು ದಿನಗಳಿಂದ ರಾತ್ರಿ ಹಗಲು ಧಾರಾಕಾರವಾಗಿ ಮಳೆ ಸುರಿಯುವುದರಿಂದ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯ ಪ್ರದೇಶದಿಂದ ಹೆಚ್ಚನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸಾಗುವ ಲಘು ವಾಹನ ಚಾಲಕರು ಮತ್ತು ಪ್ರಯಾಣಿಕರು ಭಯದ ನೆರಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಪೊನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದ ರಸ್ತೆಯಲ್ಲಾ ನದಿಯಂತೆ ಕಾಣುತ್ತಿದೆ ಆದರೆ ಕಾರು ಮತ್ತು ಬೈಕ್ ಸವಾರರು ಜೀವ ಭಯದಿಂದ ಸಾಗುತ್ತಿರುವ ದೃಶ್ಯಗಳು ಸಹ ಕಂಡು ಬಂದಿದೆ.

ಪಕ್ಕದಲ್ಲಿ ಮಾರ್ಕಂಡೆಯ ನದಿ ಇರುವುದರಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ನದಿ ಮಟ್ಟ ಎರುತ್ತಿದೆ ಹೀಗಾಗಿ ಪ್ರಯಾಣಿಕರು ಜೀವ ಭಯದ ನೆರಳಲ್ಲಿ ಸಾಗುವಂತಾ ಪರಿಸ್ಥಿತಿ ಜಿಲ್ಲೆಯ ಸುತಗಟ್ಟಿ ಕ್ರಾಸ್ ಬಳಿ ನಡೆದಿದೆ.

ಹಾಗೇಯೆ ಹುಕ್ಕೆರಿ ತಾಲೂಕಿನ ದಡ್ಡಿ ಗ್ರಾಮದಲ್ಲಿರುವ ರೈತರು ಸಂಚರಿಸುವ ರಸ್ತೆಗಳು ಸಹ ಸಂಪೂರ್ಣ ಜಲಾವೃತಗೊಂಡಿದ್ದು ರೈತರು ತೊಂದರೆ ಅನುಭವಿಸುವಂತಾಗಿದೆ.

About The Author