ರಸ್ತೆಯಲ್ಲಿ ಬೃಹತ್ ತೆಗ್ಗು ಗುಂಡಿ ಬಿದ್ದಿದ್ದು ಎಚ್ಚೆತುಕೊಳ್ಳದ ಪಂಚಾಯತಿ ಅಧಿಕಾರಿಗಳು

www.karnatakatv.net : ಬೈಲಹೊಂಗಲ : ಜನರು ಓಡಾಡುವ ಸ್ಥಳದಲ್ಲಿ ಬೃಹತ್ ತೆಗ್ಗು ಗುಂಡಿ ಬಿದ್ದಿದ್ದು ಸಣ್ಣ ಪುಟ್ಟ ಮಕ್ಕಳನ್ನು ಹೊರ ಬೀಡದ ಪೋಷಕರು.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು ಆದರೆ ಮೊನ್ನೆ ಸುರಿದ ಧಾರಾಕಾರಾ ಮಳೆಗೆ ಸಿಸಿ ರಸ್ತೆ ಕುಸಿದು ಬಿದ್ದಿದ್ದರೂ ಸಹ  ಎಚ್ಚೆತ್ತುಕ್ಕೊಳ್ಳದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಅಕ್ರೋಶ.

ತೆಗ್ಗು ಗುಂಡಿ ಬಿದ್ದಿರುವ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಸದಸ್ಯರು ಬಂದು ವಿಕ್ಷಣೆ ಮಾಡಿ ಹೋಗಿದ್ದಾರೆ ಆದರೂ ಸಹ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ಸ್ಥಳಿಯರು ಅಕ್ರೋಶ ಹೊರ ಹಾಕಿದರು.ಈ ರಸ್ತೆಯಲ್ಲಿ ದಿನವೀಡ ಸ್ಥಳಿಯರು ಮತ್ತು ಸಣ್ಣ ಮಕ್ಕಳು,ದನ ಕರುಗಳು,ಓಡಾಡುವ ಸ್ಥಳದಲ್ಲಿ ಈ ರೀತಿಯಲ್ಲಿ ತೆಗ್ಗು ಗುಂಡಿ ಬಿದ್ದಿದ್ದರಿಂದ ಸ್ಥಳಿಯರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಪಂಚಾಯತಿ ಅಧಿಕಾರಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ ಇಲ್ಲಿ ಕತ್ತಲ ಸಮಯದಲ್ಲಿ ಸಣ್ಣ ಮಕ್ಕಳು ಆಟ ಆಡುತ್ತವೆ ಅದೇ ರೀತಿಯಲ್ಲಿ ಮಕ್ಕಳ ಓಡಾಡುವಂತಹ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಆದರೆ ಪಂಚಾಯತಿ ವಿರುದ್ದ ಪ್ರತಿಭಟನೆ ನಡೆಸಲಾಗುತ್ತದೆ.ಆದಷ್ಟು ಬೇಗನೆ ಸರಿ ಪಡಿಸಬೇಕು  ಎಂದು ಅಧಿಕಾರಿಗಳ ವಿರುದ್ದ ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದರು.

About The Author