www.karnatakatv.net : ರಾಯಚೂರು : ಪ್ರವಾಹದ ಭೀತಿ ಹಿನ್ನಲೆ ನದಿ ತೀರದ ಗ್ರಾಮಗಳ ಗರ್ಭಿಣಿ ಮಹಿಳೆಯರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿರುವ ಘಟನೆ ಲಿಂಗಸ್ಗೂರು ತಾಲ್ಲೂಕಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಗ್ರಾಮದಲ್ಲಿ ಇರುವ ಗರ್ಭಿಣಿ ಮಹಿಳೆಯರನ್ನು ತಾಲ್ಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ . ಆರೋಗ್ಯ ಇಲಾಖೆಯಿಂದ ಮುಂಚಿತವಾಗಿಯೇ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕಾರ್ಯ ನಡೆದಿದೆ . ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4 ಲಕ್ಷ ಕ್ಯುಸೆಕ್ಸ್ ನೀರು ಹರಿಬಿಟ್ಟ ಹಿನ್ನಲೆಯಲ್ಲಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಲಿಂಗಸ್ಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದೆ. ಉಳಿದಿರುವ ಜಲದುರ್ಗ ಸೇತುವೆಗೂ ಮುಳುಗಡೆ ಭೀತಿ ಎದ್ದು ಕಾಣುತ್ತಿತ್ತು . ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ ನೀರು. ಆ ಹಿನ್ನಲೆ ಪ್ರವಾಹದ ಭೀತಿ ಎದುರಿಸುತ್ತಿರುವ ಗ್ರಾಮಗಳ ಗರ್ಭಿಣಿ ಮಹಿಳೆಯರು. ಗರ್ಭಿಣಿಯರನ್ನ ಮುಂಚಿತವಾಗಿಯೇ ಆಸ್ಪತ್ರೆ ದಾಖಲಿಸುವ ಕಾರ್ಯ ಭರದಿಂದ ಸಾಗಿದೆ.. ಆರೋಗ್ಯ ಇಲಾಖೆಯಿಂದ ಗರ್ಭಿಣಿಯರ ಸ್ಥಳಾಂತರ ೧೦೮ ಆಂಬ್ಯುಲೆನ್ಸ್ ಮುಖಾಂತರ ಪ್ರತೀ ಪ್ರವಾಹ ಪೀಡಿತ ಗ್ರಾಮಗಳಿಂದ ಶಿಫ್ಟ್. ಪೋಷಕರ ಮನವೊಲಿಸಿ ಮಹಿಳೆಯರನ್ನ ಆಸ್ಪತ್ರೆಗೆ ಕರೆತರುತ್ತಿರೋ ಸಿಬ್ಬಂದಿ.
ವರದಿ : ಅನಿಲ್ ಕುಮಾರ್ ಕರ್ನಾಟಕ ಟಿವಿ ರಾಯಚೂರು