ಕೆ ಎಸ್ ಈಶ್ವರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ

www.karnatakatv.net : ರಾಯಚೂರು : ಮಾಜಿ ಸಚಿವರಾದ ಕೆ ಎಸ್ ಈಶ್ವರಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕುರುಬ ಸಮಾಜ ವತಿಯಿಂದ  ಒತ್ತಾಯಿಸಿದರು. ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕುರುಬ ಸಮುದಾಯದ ಜಿಲ್ಲಾ  ಅದ್ಯಕ್ಷರಾದ   ಕೆ ಬಸವಂತಪ್ಪ ಮುಖ್ಯಮಂತ್ರಿ ಗಳಿಗೆ ಅಭಿನಂದಿಸಿ,  4 ದಶಕಗಳಿಂದ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಮಾಜಿ ಕೆ ಎಸ್ ಈಶ್ವರಪ್ಪನವ ಪ್ರಮುಖಪಾತ್ರವಿದೆ. ಅವರ ಕೆಲಸ ಕಾರ್ಯಗಳನ್ನು ಗುರ್ತಿಸಿ  ವರಿಷ್ಠರು ಹಾಗು ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು. ಜಿಲ್ಲೆಯ ದೇವದುರ್ಗ ತಾಲ್ಲೂಕಿನ  4  ಬಾರಿ ಶಾಸಕರಾಗಿದರೆ ಹಾಗೂ ಜಿಲ್ಲೆಯ ನಗರ ಶಾಸಕರಿಗೆ ಜಲ್ಲೆಗೆ ಸಚಿವ ‌ ಸ್ಥಾನ ನೀಡುವುದಾಗಿ ಒತ್ತಾಯಿಸಿದರು.

About The Author