ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಗೆ

www.karnatakatv.net : ಟೋಕಿಯೊ ಒಲಿಂಪಿಕ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಗೆಲುವು ಕಂಡಿದೆ. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆಯನ್ನು ಉಳಿಸಿಕೊಂಡಿದೆ.

ಆಟದ 57ನೇ ನಿಮಿಷದಲ್ಲಿ ನವನೀತ್ ಕೌರ್ ಗೋಲ್ ಮಾಡಿದ್ರು. ಇದಕ್ಕೂ ಮೊದಲು  ಭಾರತ, ವಿಶ್ವದ ನಂಬರ್ ಒನ್ ತಂಡ ನೆದರ್ಲ್ಯಾಂಡ್ ವಿರುದ್ಧ 5-1 ರಿಂದ ಸೋಲುಂಡಿತ್ತು. ಜರ್ಮನಿ 2-0 ಅಂತರದಲ್ಲಿ ಭಾರತ ತಂಡವನ್ನು ಸೋಲಿಸಿತ್ತು. ಹಾಲಿ ಚಾಂಪಿಯನ್ ಯುಕೆ 4-1ರಿಂದ ಭಾರತವನ್ನು ಸೋಲಿಸಿತ್ತು.

ಈ ಮುನ್ನ ರಾಣಿ ರಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಮೊದಲ ಮೂರು ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಸೋಲು ಕಂಡಿತ್ತು ಆದರೆ ಭಾರತ ಮತ್ತು ಐರ್ಲೆಂಡ್ ವಿರುದ್ಧ ಇಂದು ನಡೆದ ಪಂದ್ಯದ ಮೊದಲ 15 ನಿಮಿಷಗಳಲ್ಲಿ ಯಾವುದೇ ಗೋಲು ಪಡೆಯಲು ಸಾಧ್ಯವಾಗಲಿಲ್ಲ. 15 ನಿಮಿಷಗಳ ಕೊನೆಗೆ ಸ್ಕೋರ್ ಲೈನ್ 0-0 ಆಗಿತ್ತು.

About The Author