www.karnatakatv.net : ಹುಬ್ಬಳ್ಳಿ: ಅರೆ ಹುಬ್ಬಳ್ಳಿ-ಧಾರವಾಡ ಮಂದಿ ಯಾವಾಗ ಚುನಾವಣೆ ನಡೆಯುತ್ತೋ ಈ ಮಹಾನಗರ ಪಾಲಿಕೆದು ಅಂತಿದ್ದರೂ. ಅಭಿವೃದ್ಧಿ ಆಗುತ್ತಿಲ್ಲ, ಮೂಲಭೂತ ಸೌಕರ್ಯಗಳ ಸಮಸ್ಯೆ ಆದರೆ ಯಾರಿಗೆ ಕೇಳಬೇಕು ಅಂತ ಗೊಂದಲದಲ್ಲಿದ್ದ ಜನರಿಗೆ ಈಗ ಖುಷಿ ಬಂದಹಾಗೇ ಆಗಿದೆ. ಹಾಗಿದ್ದರೇ ಬಂತು ನೋಡ್ರಿ ಮಹಾನಗರ ಪಾಲಿಕೆ ಚುನಾವಣೆ….
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಡೆದಿದ್ದ ನಮ್ಮ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಾಕಷ್ಟು ವಿಘ್ನಗಳು ಎದುರಾಗಿದ್ದವೂ ಆದರೇ ಆಷಾಢ ಮುಗಿದು ಶ್ರಾವಣ ಪ್ರಾರಂಭವಾಗುತ್ತಿದ್ದಂತೆಯೇ ಮಹಾನಗರ ಪಾಲಿಕೆ ಚುನಾವಣೆಗೂ ಶ್ರಾವಣದ ಶುಭ ಸಂದರ್ಭ ಕೂಡಿ ಬಂದಿದೆ. ಕಳೆದ ಸುಮಾರು ಮೂರು ವರ್ಷಗಳ ಕಾಲ ಜನಪ್ರತಿನಿಧಿಗಳು ಇಲ್ಲಿದೆ. ಅಧಿಕಾರಿಗಳಿಂದಲೇ ಆಡಳಿತ ನಡೆಸಿಕೊಂಡು ಬಂದಿದ್ದ ಪಾಲಿಕೆಗೆ ಈಗ ಚುನಾಯಿತ ಪ್ರತಿನಿಧಿಗಳು ಆಗಮಿಸುವ ಕಾಲ ಸಮೀಪಿಸುತ್ತಿದೆ.
ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಿಂದೆ 67 ವಾರ್ಡ್ ಗಳಿದ್ದವು. ಅವುಗಳನ್ನು ಮರು ವಿಂಗಡಿಸಿ 82 ವಾಡ್೯ಗಳನ್ನಾಗಿ ಮಾಡಲಾಗಿದೆ. ಆದರೆ ಇದರಲ್ಲಿ ಕೆಲವೊಂದು ವಾರ್ಡ್ ಗಳಲ್ಲಿ ಮತದಾರರ ಪಟ್ಟಿಯ ಕುರಿತು ಕೆಲವೊಂದು ರಾಜಕೀಯ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ರೀಟ್ ಅರ್ಜಿಯನ್ನು ಕೂಡ ಹೈಕೋರ್ಟ್ ಗೆ ಸಲ್ಲಿಸಿದ್ದರು. ಈ ಎಲ್ಲ ಗೊಂದಲಕ್ಕೆ ಫುಲ್ ಸ್ಟಾಪ್ ಹಾಕಿದ ರಾಜ್ಯ ಚುನಾವಣೆ ಆಯೋಗ ಸೆಪ್ಟೆಂಬರ್ 23ಕ್ಕೆ ಚುನಾವಣೆ ನಡೆಸಲು ಸೂಚನೆ ನೀಡಿದೆ. ಇನ್ನೂ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅವಳಿನಗರದಲ್ಲಿ 837 ಮತಗಟ್ಟೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಅವಳಿನಗರದಲ್ಲಿ 8,13,257 ಜನ ಮತದಾರರು ಈ ಬಾರಿ ಮತ ಚಲಾವಣೆ ಮಾಡಲಿದ್ದು, ಎಲ್ಲ ಮತದಾರರು ಕೂಡ ತಮ್ಮ ಹಕ್ಕನ್ನು ಚಲಾವಣೆ ಮಾಡಲು ಹು-ಧಾ ಅವಳಿನಗರದ ಪಾಲಿಕೆ ಸಕಲ ಸಿದ್ಧತೆಗಳನ್ನು ಮಾಡಿದೆ. ಅಂತೂ ಇಂತೂ ಬಹುನಿರೀಕ್ಷಿತ ಚುನಾವಣೆ ಬಂತು. ನಮ್ಮ ಜನರ ಕಷ್ಟ ಇನ್ನಾದರೂ ಬಗೆಹರಿಯಲಿದೇಯಾ ಕಾದು ನೋಡಬೇಕಿದೆ.
ಕರ್ನಾಟಕ ಟಿವಿ ಹುಬ್ಬಳ್ಳಿ