Bengaluru: ಯೂಟ್ಯೂಬರ್ ಅಮುಕು ಡಮುಕು ಮಂಜು ವಿರುದ್ಧ ಎಫ್‌ಐಆರ್ ದಾಖಲಾಾಗಿದೆ. ಇದು ಈತನ ವಿರುದ್ಧ ದಾಖಲಾಗಿರುವ 2ನೇ ಎಫ್‌ಐಆರ್ ಆಗಿದೆ.
ಈ ಮುನ್ನ ಪಬ್‌ನಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಪಕ್ಕದ ಮನೆಯವರ ಬಳಿ ಗಲಾಟೆಯಾಗಿರುವ ಕಾರಣ ಎಫ್‌ಐಆರ್ ದಾಖಲಾಗಿದೆ.
ಪಕ್ಕದ ಮನೆಯವರಾದ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಅಮುಕು ಡಮುಕು ಮಂಜು ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ಕ-ಅಪ್ಪಕದ ಮನೆಯವರಾದ ಮಂಜುನಾಥ್ ಮತ್ತು ವಿಕ್ರಂ ಮಧ್ಯೆ ಜಗಳವಾಗಿದೆ. ಮಂಜುನ ತಮ್ಮ ಸಿದ್ಧನ ವಿಚಾರಕ್ಕಾಗಿ ಈ ಗಲಾಟೆ ನಡೆದಿದ್ದು, ಅದು ಬಡಿದಾಟದ ಹಂತ ತಲುಪಿದೆ. ಹಾಗಾಗಿ ವಿಕ್ರಂ ಎಂಬುವವರು ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಯಶವಂತಪುರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.




