www.karnatakatv.net : ಬೆಳಗಾವಿ: ಬೆಳಗಾವಿಯ ಸಬ್ ರಜಿಸ್ಟರ್ ಕಚೇರಿಗಳನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಆರಂಭಿಸಬೇಕು ಎಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ವಕೀಲರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಹೌದು ಬೆಳಗಾವಿ ಡಿಸಿ ಕಚೇರಿ ಬಳಿ ಕೋರ್ಟ ಸರ್ಕಲ್ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ ನ್ಯಾಯವಾದಿಗಳು ದಕ್ಷಿಣ ಕ್ಷೇತ್ರದಲ್ಲಿ ಆರಂಭಿಸಲು ಮುಂದಾಗಿರುವ ಸಬ್ ರಜಿಸ್ಟರ್ ಕಚೇರಿಯನ್ನು ಡಿಸಿ ಕಚೇರಿ ಆವರಣದಲ್ಲಿಯೇ ಆರಂಭಿಸುವಂತೆ ಆಗ್ರಹಿಸಿದರು.
ವಕೀಲರಿಂದ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಪೊಲೀಸರು ಮತ್ತು ವಕೀಲರ ಮಧ್ಯ ಮಾತಿನ ವಾಗ್ವಾದ ನಡೆಯಿತು.
ಈ ಸಂಧರ್ಭದಲ್ಲಿ ನ್ಯಾಯವಾದಿ ಓರ್ವರು ಮಾತನಾಡಿ ತಾಲೂಕಾ ಪ್ರದೇಶಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಿ ಒಂದೇ ಸೂರಿನಡಿ ಎಲ್ಲಾ ಇಲಾಖೆ ಮಾಡಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ಇಂತಹ ವ್ಯವಸ್ಥೆ ಮಾಡಿಲ್ಲ. ಎಲ್ಲಾ ಕಚೇರಿಗಳು ಒಂದೇ ಸೂರಿನಡಿ ಬರುವ ಒಂದು ದೊಡ್ಡ ಕಟ್ಟಡ ನಿರ್ಮಾಣ ಮಾಡಬೇಕು. ಒಂದೆಡೆ ಕಚೇರಿಗಳನ್ನ ನಿರ್ಮಾಣ ಮಾಡಬೇಕು ಹಾಗೇಯೆ ನೂರಾರು ಕಡೆ ಕಚೇರಿಗಳನ್ನು ನಿರ್ಮಾಣ ಮಾಡುವುದರಿಂದ ಜನರಿಗೆ ಸಮಸ್ಯೆ ಆಗುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಮತ್ತಷ್ಟು ನ್ಯಾಯವಾದಿಗಳು ಮಾತನಾಡಿ ಇದು ಕೇವಲ ವಕೀಲರಿಗೆ ಸಂಬಂಧಿಸಿದ ಬೇಡಿಕೆ ಇಲ್ಲ. ಬೆಳಗಾವಿ ನಗರದ ಎಲ್ಲ ಜನರ ಬೇಡಿಕೆಯಾಗಿದೆ. ಹೀಗಾಗಿ ಎರಡೂ ಸಬ್ ರಜಿಸ್ಟರ್ ಕಚೇರಿಗಳನ್ನು ಡಿಸಿ ಕಚೇರಿ ಆವರಣದಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿದರು. ಒಟ್ಟಿನಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸಬ್ ರಜಿಸ್ಟರ್ ನಿರ್ಮಾಣಕ್ಕೆ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸದೆ ಹೋದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಲವಾರು ವಕೀಲರು ಉಪಸ್ಥಿತರಿದ್ದರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ




