ತಮಿಳುನಾಡಿಗೆ ಹೋಗುವವರಿಗೆ ನಕಲಿ ಕೋವಿಡ್ ವರದಿ ನೀಡುತ್ತಿದ್ದ ಯುವಕನೋರ್ವನ ಬಂಧನ

www.karnatakatv.net : ಗುಂಡ್ಲುಪೇಟೆ: ತಮಿಳುನಾಡಿಗೆ ಹೋಗುವವರಿಗೆ ನಕಲಿ ಕೋವಿಡ್ ವರದಿ ನೀಡುತ್ತಿದ್ದ ಯುವಕನೋರ್ವನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದಾರೆ.  ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ಅನಿಲ್‍ಕುಮಾರ್(35) ಎಂಬಾತ ಬಂಧಿತ ಆರೋಪಿಯಾಗಿದ್ದು ತನಿಖೆ ನಡೆಸುತ್ತಿದ್ದಾರೆ…

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮೊಬೈಲ್ ಸರ್ವೀಸ್ ನಲ್ಲಿ ನಕಲಿ ಆರ್ ಟಿ ಪಿಸಿಆರ್ ವರದಿ ಸಿದ್ದಪಡಿಸುತ್ತದ್ದ ಜಾಲ ಪತ್ತೆಯಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯ ಅಪರಾಧ ಸಬ್ ಇನ್ಸ್ ಪೆಕ್ಟರ್ ಸುಜಾತ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ..

ನೆರೆ ರಾಜ್ಯದಿಂದ ಬರುವವರಿಗೆ ಮತ್ತು ಇಲ್ಲಿಂದ ತೆರಳುತ್ತಿದ್ದವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ , ಲಾರಿ ಚಾಲಕರಿಗೆ ಕಂಪ್ಯೂಟರ್‌ ಸೆಂಟರ್‌ನಲ್ಲಿ ನಕಲಿ ಕೋವಿಡ್ ರಿಪೋರ್ಟ್ ಪ್ರಮಾಣ ಪತ್ರ ತಯಾರಿಸಿ ನೀಡುತ್ತಿದ್ದ ಎನ್ನಲಾಗಿದೆ . ತಮಿಳುನಾಡಿನ ಗಡಿಯಲ್ಲಿ ನಕಲಿ ರಿಪೋರ್ಟ್ ಪತ್ತೆಯಾದ ಹಿನ್ನೆಲೆ ಈ ಅವ್ಯವಹಾರ ಬೆಳಕಿಗೆ ಬಂದಿದೆ . ಸದ್ಯ , ಗುಂಡ್ಲುಪೇಟೆ ಠಾಣೆಯಲ್ಲಿ ಈತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು , ಪೊಲೀಸರು ತನಿಖೆ ಮುಂದುವರಿಸಿದ್ದಾರೆ .

ಪ್ರಸಾದ್ ಕರ್ನಾಟಕ ಟಿವಿ  ಗುಂಡ್ಲುಪೇಟೆ

About The Author