Haveri News: ಹಾನಗಲ್: ಪಟ್ಟಣ ಅಂಬೇಡ್ಕರ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವಸ್ಥಾನದ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಗ್ರಾಮ ದೇವಿಯ ದೇವಸ್ಥಾನದ ಲೋಕಾರ್ಪಣೆಯ ಪೋಸ್ಟರ್ ಬಿಡುಗಡೆ ಮಾಡಿದರು.
ಬಳಿಕ ಮಾಧ್ಯಮದ ಜತೆ ಮಾತನಾಡಿರುವ ದೇವಸ್ಥಾನ ಸಮಿತಿಯ ಖಜಾಂಚಿಯಾದ ರಾಜು ಗೌಳಿ ಅವರು,ಗ್ರಾಮದೇವಿ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹೆಸರಾಂತ ಮಠಾಧೀಶರು ಗಣ್ಯರು ವಿವಿಧ ಪ್ರಮುಖರು ಆಗಮಸಲಿದ್ದಾರೆ ಎಂದರು.
ಅಲ್ಲದೇ, ಈ ಕಾರ್ಯಕ್ರಮದಲ್ಲಿ ಬರುವ ಭಕ್ತಾದಿಗಳಿಗೆ ಸತತ ಮೂರು ದಿನ ಊಟದ ವ್ಯವಸ್ಥೆ ಇರುತ್ತದೆ ಮತ್ತು ರಾತ್ರಿ 9:00ಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.




