Friday, July 11, 2025

Latest Posts

ಯಾವ ಪಿಚ್ಛರು ಇಲ್ಲಾ, ಯಾವ ರೀಲು ಇಲ್ಲಾ; ಎಸ್ ಟಿ ಸೋಮಶೇಖರ್

- Advertisement -

www.karnatakatv.net : ಚಾಮರಾಜನಗರ: ಪಿಚರ್ ಅಬಿ ಬಾಕಿ ಹೇ ಎಂಬ ಆನಂದ್ ಸಿಂಗ್ ಹೇಳಿಕೆ ವಿಚಾರ..ಯಾವ ಪಿಚ್ಛರು ಇಲ್ಲಾ, ಯಾವ ರೀಲು ಇಲ್ಲಾ.. ಸಿಎಂ ಬಸವರಾಜ್ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಇದೆ ಎಂದು  ಚಾಮರಾಜನಗರದಲ್ಲಿ ಸಹಕಾರ‌ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದರು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ‌ ಮಾದ್ಯಮದವರೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಯಾವ ಸಿನಿಮಾನು ಬಾಕಿ ಇಲ್ಲ. ಕ್ಲೀನ್ ಇಮೇಜ್ ಸರ್ಕಾರ ಕೊಡಬೇಕಬೇಕೆಂಬ ಕನಸಿದೆ  ಏನೇ ಅಸಮಾಧಾನ ಇದ್ರು ಸಿಎಂ ಜೊತೆ ಕುಳಿತು ಮಾತನಾಡಬೇಕೇ ಹೊರತು, ಹೊರಗೆ ನಿಂತು ಮಾತನಾಡಿದ್ರೆ ಪ್ರಯೋಜನವಿಲ್ಲಾ ಎಂದು ಸಚಿವ ಆನಂದ್ ಸಿಂಗ್ಗೆ ಪರೋಕ್ಷವಾಗಿ ಟಾಂಗ್   ಕೊಟ್ಟಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಕಾಂಗ್ರೆಸ್ ನವರು ಸರ್ಕಾರ ಬಿದ್ದು ಹೋಗುತ್ತೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಬೊಮ್ಮಾಯಿ ಸಿಎಂ ಆದ ಮೇಲೆ ಕಾಂಗ್ರೆಸ್ ನವರಿಗೆ ನಡುಕ ಉಂಟಾಗಿದೆ . ಬೊಮ್ಮಾಯಿ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲಾ , ಗೃಹ ಸಚಿವರಾಗಿ, ನೀರಾವರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ ಯಾರು ಏನೇ ಹೇಳಿಕೆಗಳನ್ನು ನೀಡಿದರು ಅಷ್ಟೇ ಬೊಮ್ಮಾಯಿ ಸರ್ಕಾರ ಅವಧಿ ಪೂರೈಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಟಿವಿ ಚಾಮರಾಜನಗರ

- Advertisement -

Latest Posts

Don't Miss