Friday, July 4, 2025

Latest Posts

ಗಣೇಶ್ ಚತುರ್ಥಿ ಆಚರಣೆಗೆ ನಿರ್ಬಂಧ ಹೇರಿರುವುದು ಖಂಡನೀಯ: ಪ್ರಮೋದ ಮುತಾಲಿಕ

- Advertisement -

www.karnatakatv.net : ಬೆಳಗಾವಿ: ಗಣೇಶೋತ್ಸವ ಆಚರಣೆಗೆ ಅನುಮತಿ ನೀಡದಿದ್ದರೆ ಆ.21 ರಿಂದ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೊಷ್ಡಿಯಲ್ಲಿ ಮಾತನಾಡಿದ ಅವರು ಸಮುದಾಯಗಳ ಧಾರ್ಮಿಕ ಆಚರಣೆಗಳಿಗೆ ಇಲ್ಲದ ನಿರ್ಬಂಧ ಹಿಂದೂ ಪರ ಆಚರಣೆಗಳಿಗೆ ಹಾಕಲಾಗುತ್ತಿದೆ. ಬಿಜೆಪಿ ಸರಕಾರದ ತಾರತಮ್ಯ ನೀತಿ ಖಂಡಿಸಿ ಇದೇ ಆ.21 ರಂದು ಹಿಂದೂಪರ ಧಾರ್ಮಿಕ ಶ್ರೀಗಳು ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು.

ಈಗಾಗಲೇ ರಾಜಕಿಯ ಸಮಾವೇಶಗಳು ನಡೆಯುತ್ತಿವೆ. ಶಾಲಾ-ಕಾಲೇಜು ಆರಂಭಿಸಲಾಗಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನಾಶೀರ್ವಾದ ಯಾತ್ರೆ ನಡೆಸುತ್ತಿದೆ. ಜತೆಗೆ ಕೋವಿಡ್ ಆತಂಕದಲ್ಲೂ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಮಾಡಿದ್ದಾರೆ. ಆದರೆ ಮೋಹರಂಗೆ ಇಲ್ಲದ ನಿರ್ಬಂಧ ಗಣೇಶ್ ಚತುರ್ಥಿಗೆ ಹಾಕಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಪ್ರಮೋದ ಮುತಾಲಿಕ, ಹಿಂದೂ ಪರ ಎನ್ನುತ್ತಲೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಆಂತರಿಕ ಕಚ್ಚಾಟಕ್ಕೆ ಭಾರತೀಯ ಸಂಸ್ಕೃತಿ ಹಾಳು ಮಾಡುತ್ತಿದೆ. ಹಿಂದೂ ಹುಲಿಗಳು, ಹಿಂದೂ ಶಾಸಕರು ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಸರಕಾರದ ವಿರುದ್ಧ  ಬಾಯಿ ಬಿಡುತ್ತಿಲ್ಲ. ಅಂತವರಿಗೆ ನಾಚಿಕೆ ಆಗಬೇಕು. ಸರಕಾರ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಪ್ರತಿಭಟನೆ ಇನ್ನೂ ಉಗ್ರವಾಗಿ ನಡೆಸಲಾಗುವುದು ಎಂದು ಪ್ರಮೋದ ಮುತಾಲಿಕ ಎಚ್ಚರಿಕೆ ನೀಡಿದರು.

ಶ್ರೀರಾಮನ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿ ಡಾಭಾ ತೆಗೆದುಕೊಂಡು ಹೊಂದೂ ಯುವತಿಗೆ ಅನ್ಯಾಯ ಮಾಡಿದ್ದರೂ ಇನ್ನೂವರೆಗೂ ಆರೋಪಿಯನ್ನು ಬಂಧಿಸಿಲ್ಲ. ಕೊನೆ ಪಕ್ಷ ಢಾಬಾವನ್ನೂ ಮುಚ್ಚಿಲ್ಲ. ಪೊಲೀಸ್  ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದಾರೆ ಎಂದು ಪ್ರಮೋದ ಮುತಾಲಿಕ ಹೇಳಿದರು.

ಅಧಿಕಾರಕ್ಕೆ ಬಂದವರು ರಾಜಕೀಯ ಒತ್ತಡಕ್ಕೆ ಮಣಿದು ಮಾರ್ಯಾದೆ ಕಳೆದುಕೊಳ್ಳಬೇಡಿ. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸಲು ಪ್ರಧಾನಮಂತ್ರಿ ಸೇರಿದಂತೆ ರಾಷ್ಟ್ರಪತಿ ವರೆಗೂ ಹೋಗುತ್ತೇವೆ ಎಂದು ಹೇಳಿದರು.

ಅಪಘಾನಿಸ್ತಾನದ ಮುಸ್ಲಿಂಮರು ಬೇಡ: ಈಗಾಗಲೇ ಪಶ್ಚಿಮ ಬಂಗಾಳ ವಲಸಿಗ ರೋಹಿಂಗ್ಯಾ ಅವರಿಂದ ಇಡೀ ದೇಶದಲ್ಲಿ ಅರಾಜಕತೆ ಮೂಡಿದೆ. ಇನ್ನು ಅಫಘಾನಿಸ್ತಾನದ ಮುಸ್ಲಿಂ ರನ್ನು ದೇಶಕ್ಕೆ ಸೇರಿಸಿಕೊಳ್ಳುವುದರಿಂದ ಇನ್ನಷ್ಟು ದೇಶವಿದ್ರೋಹಿ ಚಟುವಟಿಕೆ ಹೆಚ್ಚುಬಹುದಾಗಿದ್ದರಿಂದ ಕೇಂದ್ರ ಸರಕಾರ  ಅಪಘಾನಿಸ್ತಾನದಲ್ಲಿರುವ ಭಾರೀಯರ ರಕ್ಷಣೆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿನಾಯಕ ಅಂಗ್ರೋಳ್ಳಿ, ಸಚಿನ ಗಡ್ಕರಿ, ರಮೇಶ್ ಗುಡಗುಡಗಿ ಇತರರು ಉಪಸ್ಥಿತರಿದ್ದರು.

ನಾಗೇಶ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ

- Advertisement -

Latest Posts

Don't Miss