www.karnatakatv.net : ಬೆಳಗಾವಿ: ಬೆಳಗಾವಿ ಜನತೆಗೆ ಕೋರೊನಾ ಮಹಾಮಾರಿಯಿಂದ ಎರಡು ವರ್ಷಗಳಿಂದ ಹಿಂದೂ ಧಾರ್ಮಿಕ ಹಬ್ಬಗಳ ಆಚರೆಣೆಗೆ ಬ್ರೇಕ್, ಆದರೂ ಕೋರೊನಾ ರೂಲ್ಸ್ ಗೆ ಖ್ಯಾರೆ ಎನ್ನದ ಬೆಳಗಾವಿ ಜನತೆ.
ರಾಜ್ಯದಲ್ಲಿ ಧಾರ್ಮಿಕ ಹಬ್ಬಗಳು ಬಂದಾಗ ಮನೆಯಲ್ಲಿ ಎಲ್ಲರೂ ಸಂತಸ ಸಡಗರದಿಂದ ಆಚರಣೆ ಮಾಡುತ್ತಾ ಬಂದಿರುವ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಕೂಡಾ ಒಂದು ಆದರೆ ಕೋರೊನಾ ಮಹಾಮಾರಿಯಿಂದ ಸರ್ಕಾರಗಳು ವಿವಿಧ ಹಬ್ಬಗಳಿಗೆ ಬ್ರೇಕ್ ಹಾಕಿದ್ದಾರೆ. ಆದರೆ ಜನರ ಹಿತ ದೃಷ್ಟಿಯಿಂದ ಕೋರೊನಾ ಹೋಗಲಾಡಿಸಲು ಸರ್ಕಾರ ಕಟ್ಟುನಿಟ್ಟಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ್ದರೂ ಕೂಡಾ ಜನರು ಕೋರೊನಾದಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ಹೀಗಾಗಿ ಸರಕಾರ ಹಲವು ಕೋರೊನಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದರೂ ಸಹ ಜನರಿಗೆ ಹಬ್ಬಗಳೆ ಮುಖ್ಯವಾಗಿದ್ದು ಇದರಿಂದ ಮೂರನೇ ಅಲೆ ಬಂದ್ರೂ ಬರಬಹುದು.
ಆದರೆ ಒಂದ ಕಡೆ ಸರ್ಕಾರ ಮೂರನೇ ಅಲೆ ಆತಂಕದಲ್ಲಿ ಇರುವಾಗ ಜನರು ಸಾಮಾಜಿಕ ಅಂತರ ಮರೆತು,ಮಾಸ್ಕ ಧರಿಸದೆ ನಗರದಲ್ಲಿ ಸಾಮಗ್ರಿಗಳನ್ನು ಖರೀದಿಸಲು ಮುಗಿಬಿದ್ದ ಜನರು ಸರ್ಕಾರದ ಮಾರ್ಗಸೂಚಿಗೆ ಬ್ರೇಕ್ ಹಾಕುತ್ತಿರುವ ಜನರು ನಗರದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿ ತರಕಾರಿ, ಹೂ ಹಣ್ಣು ಖರೀದಿಸಲು ಮುಂದಾಗಿರೋ ಜನತೆ ಸರ್ಕಾರದ ಆದೇಶಗಳಿಗೂ ಖ್ಯಾರೆ ಎನ್ನದ ಜನ .
ನಗರದ ಕಂಬಳಿ ಕೂಟ, ಖಡೇಬಜಾರ ಸೇರಿದಂತೆ ಜನವೋ ಜನ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಯಲ್ಲಿ ತೊಡಗಿರೋ ನಗರದ ಜನ, ಪೂಜೆ ಸಾಮಾನು ಖರೀದಿಸಲು ಮುಂಜಾನೆಯಿಂದಲೇ ಮಾರ್ಕೆಟ್‌ನತ್ತ ಬರುತ್ತಿರುತ್ತದ್ದಾರೆ ಆದರೆ ಸರಕಾರ ಕೋರೊನಾ ಮೂರನೇ ಅಲೆಗೆ ರೂಲ್ಸ್ ಹಾಕಿರುವುದು ಯಾವ ಉದ್ದೇಶಕ್ಕೆ ಎನ್ನುವುದು ತಿಳಿಯುತ್ತಿಲ್ಲ.
ನಾಗೇಶ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ



