Thursday, February 6, 2025

Latest Posts

ಸೆಪ್ಟೆಂಬರ್ 10ರ ವಳಗೆ 15 ಮಂದಿ ಸದಸ್ಯರ ಪಟ್ಟಿ ಬಿಡುಗಡೆ; ಐಸಿಸಿ ಡೆಡ್ಲೈನ್

- Advertisement -

www.karnatakatv.net : ಸೆಪ್ಟೆಂಬರ್ ಮೊದಲ ವಾರದಲ್ಲಿ ಐಸಿಸಿ ಟಿ-20 ವಿಶ್ವಕಪ್​ಗೆ ಭಾರತದ 15 ಮಂದಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌  ಪ್ರಕಟಿಸಿದ್ದು, ಅಕ್ಟೋಬರ್‌ 24 ರಂದು ಪಾಕಿಸ್ತಾನ ವಿರುದ್ಧ ಕಾದಾಟ ನಡೆಸುವ ಮೂಲಕ ಭಾರತ ತಂಡ ಚುಟುಕು ವಿಶ್ವಕಪ್‌ ಅಭಿಯಾನವನ್ನು ಆರಂಭಿಸಲಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್​ನಂತಹ ಪ್ರಮುಖ ತಂಡಗಳು ಅದಾಗಲೇ ಟಿ-20 ವಿಶ್ವಕಪ್​ಗೆ 15 ಸದಸ್ಯರ ತಂಡವನ್ನು ಪ್ರಕಟ ಮಾಡಿದೆ. ಆದರೆ, ಟೀಮ್ ಇಂಡಿಯಾದಿಂದ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಭಾರತ ತಂಡ ಯಾವಾಗ ಪ್ರಕಟ ಆಗುತ್ತೆ ಎಂಬ ಮಾಹಿತಿ ಹೊರಬಿದ್ದಿದೆ. ಸೆಪ್ಟೆಂಬರ್ 10ರ ವಳಗೆ ಎಲ್ಲ ತಂಡಗಳು ಆಟಗಾರರ ಪಟ್ಟಿಯನ್ನು ಫೈನಲ್ ಮಾಡಬೇಕು ಎಂದು ಐಸಿಸಿ ಡೆಡ್​ಲೈನ್ ನೀಡಿದೆ.

- Advertisement -

Latest Posts

Don't Miss