Friday, August 8, 2025

Latest Posts

ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿ ಫುಲ್ ಜೋರು…!

- Advertisement -

www.karnatakatv.net : ಹುಬ್ಬಳ್ಳಿ: ನಾಳೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳತ್ತ ಜನಸಾಗರವೇ ಹರಿದು ಬರುತ್ತಿದೆ. ಕೊರೋನಾ ಮರೆತು ಮಾರ್ಕೆಟ್ ಗಳತ್ತ ಜನರ ಖರೀದಿಗೆ ಬರುತ್ತಿದ್ದಾರೆ.

ಹೌದು… ಸಾಲು ಸಾಲು ಹಬ್ಬಗಳ ಹಿನ್ನೆಲೆ ಹೂ, ಹಣ್ಣು ಖರೀದಿಗೆ  ಜನರು ಮುಗಿಬಿದ್ದಿದ್ದಾರೆ. ಹುಬ್ಬಳ್ಳಿಯ ದುರ್ಗದ ಬೈಲ್ ಮಾರ್ಕೆಟ್ ನಲ್ಲಿ ಜನವೋ ಜನ. ಕೋವಿಡ್ ನಿಗಮಗಳನ್ನು ಪಾಲಿಸದೆ ಖರೀದಿಯಲ್ಲಿ ಜನ ಫುಲ್ ಬ್ಯುಸಿಯಾಗಿದ್ದಾರೆ.

ಮಾಸ್ಕ್, ಸಾಮಾಜಿಕ ಅಂತರ ಮರೆತು ಖರೀದಿಗೆ ಮುಂದಾಗಿದ್ದಾರೆ. 3ನೆಯ ಅಲೆ ಆತಂಕವಿದ್ದರೂ ಸಹ ಅದಕ್ಕೆ ಕ್ಯಾರೆ ಎನ್ನದ ಜನರು ಖರೀದಿಗೆ ಆಗಮಿಸುತ್ತಿದ್ದಾರೆ. ಪಾಲಿಕೆಯಿಂದ ಮಾರ್ಷಲ್ ನೇಮಕ ಮಾಡಿದರೂ ಸಹ ಉಪಯೋಗ ಇಲ್ಲದಂತಾಗಿದೆ.

ಕರ್ನಾಟಕ ಟಿವಿ ಹುಬ್ಬಳ್ಳಿ

- Advertisement -

Latest Posts

Don't Miss