www.karnatakatv.net : ಬೆಳಗಾವಿ: ಯೋಗೆಶಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನನ ಮೇಲೆ ಹೊರಗ ಬಂದರು ನಂತರ ವಿನಯ ಕುಲಕರ್ಣಿಗೆ ಅದ್ದೂರಿ ಸ್ವಾಗತ ಮಾಡಿಕೊಂಡ ಅಭಿಮಾನಿಗಳು ಉಚ್ಚ ನ್ಯಾಯಾಲಯ ನನಗೆ ಜಾಮೀನು ಮಂಜೂರು ಮಾಡಿದ್ದಕ್ಕೆ ಅಭಿನಂದನೆಗಳು ಸಲ್ಲಿಸುತ್ತೇನೆ ಎಂದರು.
ಬೆಳಗಾವಿ ಹಿಂಡಲಗಾ ಜೈಲಿನಿಂದ ಹೊರ ಬಂದಾಗ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.ನಾನು, ನನ್ನ ಕುಟುಂಬಸ್ಥರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಹಲವಾರು ಸ್ವಾಮೀಜಿಗಳು, ರಾಜಕೀಯ ಎಲ್ಲ ಮುಖಂಡರು, ನನ್ನ ಕ್ಷೇತ್ರದ ಜನರು, ಅಭಿಮಾನಿಗಳು ಸಾಕಷ್ಟ ಶ್ರಮಿಸಿದ್ದಾರೆ. ಅವರಿಗೆಲ್ಲ ನಾನು ಋಣಿಯಾಗಿರುತ್ತೇನೆ ಎಂದರು.
ನಾನು ಇಂದು ನಿನ್ನೆಯಿಂದ ರಾಜಕೀಯ ಮಾಡಿದವನಲ್ಲ. ರೈತ ಕುಟುಂಬದಿಂದ, ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಿ ಹೋರಾಟ ಮಾಡಿಕೊಂಡು ಬಂದವನು. ಇದು ನನ್ನ ಕ್ಷೇತ್ರದ ಜನರಿಗೆ ಗೊತ್ತಿರುವ ವಿಷಯವಾಗಿದೆ. ಅದ್ದರಿಂದ ನಾನು ನನ್ನ ಕ್ಷೇತ್ರದ ಜನ ನನ್ನ ನಂಬಿದ ಜನರಿಗೆ ಎಂದಿಗೂ ನಾನು ಚಿರ ಋಣಿಯಾಗಿರುತ್ತೇನೆ ಎಂಥ ಹೋರಾಟಕ್ಕೂ ನಾನು ಸಿದ್ಧನಾಗಿರುತ್ತೇನೆ ಎಂದು ಹೇಳಿದರು.
ಜೈಲಿನಲ್ಲಿದ್ದಾಗ ಟಾಸ್ಕ್ ನೀಡಿದ್ದರು. ಅವರ ಕಾಯ್ದೆ, ಕಾನೂನಿ ಪ್ರಕಾರ ಇದೆ. ಸಾಕಷ್ಟು ವಿಚಾರ, ಓದುವುದು ಹಾಗೂ ಹಲವಾರು ಬದಲಾವಣೆ ಕಂಡುಕೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ಯಾವ ರೀತಿ ಹೆಜ್ಜೆ ಇಡಬೇಕೆಂದು ಕಲಿತುಕೊಂಡಿದ್ದೇನೆ ಎಂದರು.
ರಾಜಕೀಯ ಜೀವನ ಬೇರೆ. ನನ್ನ ಜೀವನ ಬೇರೆ ಸಾಮಾನ್ಯ ಜನರು ಕೂಡ ನನಗೆ ಪ್ರೀತಿ ವಿಶ್ವಾಸದಿಂದ ನೋಡುತ್ತಾರೆ. ಅವರಿಗೆ ಎಂದೂ ನಾನು ಋಣಿಯಾಗಿದ್ದೇನೆ ಎಂದು ಬೆಳಗಾವಿ ಹಿಂಡಲಗಾ ಜೈಲಿನಿಂದ ಹೊರಗೆ ಬಂದು ಮಾತನಾಡಿದರು.
ಬೆಳಗಾವಿಯ ಹಿಂಡಲಗಾ ಜೈಲಿನ ಮುಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಅಭಿಮಾನಿಗಳು ಬೆಳಗ್ಗೆ ಬಂದು ಕಾದು ಕುಳಿತಿದ್ದರು. ಬರುವಷ್ಟರಲ್ಲಿ ವಿನಯ ಕುಲಕರ್ಣಿ ಅವರನ್ನ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು.
ನಾಗೇಶ್ ಕರ್ನಾಟಕ ಟಿವಿ ಬೆಳಗಾವಿ




