- Advertisement -
www.karnatakatv.net : ಹುಬ್ಬಳ್ಳಿ: ಹುಬ್ಬಳ್ಳಿಗೆ ಬಂದಿದ್ದು ಬಹಳ ಸಂತೋಷ ಆಗಿದೆ. ಬಹಳಷ್ಟು ಜನ ನನ್ನ ಆತ್ಮೀಯರಿದ್ದಾರೆ. ಅವರೆಲ್ಲರನ್ನೂ ನೋಡುವ ಸೌಭಾಗ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನಾನು ರಾಜ್ಯಕ್ಕೆ ಸಿಎಂ ಇರಬಹುದು ಆದರೆ ಹುಬ್ಬಳ್ಳಿಯವನು. ನಾನು ಎಲ್ಲಿಯೇ ಇದ್ದರೂ ಹುಬ್ಬಳ್ಳಿ ಬಗ್ಗೆ ಸದಾ ಚಿಂತೆ ಇದೆ. ಹುಬ್ಬಳ್ಳಿಯ ಅಭಿವೃದ್ಧಿಗೆ ಶೆಟ್ಟರ್, ಜೋಶಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಹುಬ್ಬಳ್ಳಿಯನ್ನು ಮುಂಬೈ ಕರ್ನಾಟದ ಪ್ರಮುಖ ಕೈಗಾರಿಕಾ ಪ್ರದೇಶವನ್ನಾಗಿ ಚಿಂತನೆ ಇದೆ ಎಂದರು. ಬಳ್ಳಾರಿಯಲ್ಲಿ ಯಾರೋ ಒಬ್ಬರನ್ನು ಉಸ್ತುವಾರಿ ಮಾಡಬೇಕು. ಮುಂದಿನ ದಿನಗಳಲ್ಲಿ ಮಾಡ್ತೀವಿ. ನನ್ನ ಜೊತೆ ಆನಂದ ಸಿಂಗ್ ನಿರಂತರ ಸಂಪರ್ಕದಲ್ಲಿದ್ದಾರೆ. ಅವರ ಮುನಿಸು ಆದಷ್ಟು ಬೇಗ ತಣಿಯುತ್ತದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಟಿವಿ ಹುಬ್ಬಳ್ಳಿ
- Advertisement -