www.karnatakatv.net : ದೇವನಹಳ್ಳಿ : ಪ್ರಸಾದ ತೆಗೆದುಕೊಳ್ಳಲು ದಲಿತ ಬಾಲಕ ದೇವಸ್ಥಾನಕ್ಕೆ ಹೋದಾಗ, ಸರ್ವಣಿಯ ಯುವಕ ಬಾಲಕನ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಸರ್ವಣಿಯ ಯುವಕನನ್ನ ಪ್ರಶ್ನೆ ಮಾಡಿದಕ್ಕೆ ದಲಿತ ಕುಟುಂಬದ ಮೇಲೆ ಮರಾಣಾಂತಿಕ ಹಲ್ಲೆ ಮತ್ತು ಬಾಲಕನ ತಾಯಿಯ ಗುಪ್ತಾಂಗದ ಮೇಲು ಹಲ್ಲೆ ನಡೆಸಿದ್ದಾರೆ, ವಿಶ್ವನಾಥಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ರಕ್ಷಣೆ ನೀಡುವಂತೆ ದಲಿತ ಕುಟುಂಬ ಕಣ್ಣೀರು ಹಾಕಿದೆ.
ದೇವನಹಳ್ಳಿ ತಾಲೂಕು ರಾಮನಾಥಪುರ ಗ್ರಾಮದ ಮುನಿಆಂಜಿನಪ್ಪ ಕುಟುಂಬದ ಮೇಲೆ ಸರ್ವಣಿಯರ ಕುಟುಂಬದಿಂದ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಜರ್ಜರಿತರಾಗಿರುವ ಕುಟುಂಬ ಗ್ರಾಮದಲ್ಲಿ ನಮಗೆ ರಕ್ಷಣೆ ಬೇಕೆಂದು ಕಣ್ಣೀರು ಹಾಕುತ್ತಿದೆ, ದಲಿತರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಶೋರ್, ಮಂಜುನಾಥ್, ವೆಂಕಟೇಗೌಡ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಘಟನೆಯ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಕರ್ನಾಟಕ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲೆ ಎಚ್ಚೆತ ಜಿಲ್ಲಾಧಿಕಾರಿಗಳ ತಂಡದವತಿಯಿಂದ AC: ಅರುಳ್ ಕುಮಾರ್, DYSP ಟಿ.ರಂಗಪ್ಪ, ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಎಸ್.ಕೃಷ್ಣಪ್ಪ ಇಂದು ರಾಮನಾಥಪುರ ಗ್ರಾಮಕ್ಕೆ ಭೇಟಿಕೊಟ್ಟು ವಿಚಾರಣೆ ನಡೆಸಿ, ಹಲ್ಲೆಗೊಳಗಾದ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಲು ತಿಳಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸಿ ತಲೆಮರೆಸಿಕೊಂಡಿರುವ ಆರೋಪಿಗಳನ್ನ ಪತ್ತೆಹಚ್ಚಿ ಶಿಕ್ಷೆ ನೀಡುವಂತೆ ಮಾಡಲಾಗುವುದು ಮತ್ತು ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಟಿವಿ ದೇವನಹಳ್ಳಿ