www.karnatakatv.net : ಮೈಸೂರು: ಮೈಸೂರು ಮೇಯರ್ ಸ್ಥಾನ ಇದೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಪಾಲಾಗಿದೆ. ಮೇಯರ್ ಆಗಿ ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ.
72 ಸಂಖ್ಯಾ ಬಲದ ಮೈಸೂರು ಪಾಲಿಕೆ ಬಿಜೆಪಿ ತೆಕ್ಕೆಗೆ ಜಾರಿದೆ.ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತ ಕುಮಾರಿ 22 ಮತಗಳನ್ನು ಪಡೆದ್ರೆ, ಬಿಜೆಪಿಯ ಸುನಂದಾ 26 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾದ್ರು. ಈ ನಡುವೆ ತಮ್ಮ ಅಭ್ಯರ್ಥಿಪರ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸ್ತಾರೆ ಅಂತ ಅಂದುಕೊಂಡಿದ್ದ ಜೆಡಿಎಸ್ ಗೆ ನಿರಾಶೆಯಾಯ್ತು. ಆದ್ರೆ ಕಾಂಗ್ರೆಸ್ ಸದಸ್ಯರು ಕೈಕೊಟ್ಟಿದ್ದರಿಂದ ಮೈತ್ರಿ ಲೆಕ್ಕಾಚಾರದಲ್ಲಿದ್ದ ಜೆಡಿಎಸ್ ಚುನಾವಣೆಯಿಂದಲೇ ದೂರ ಉಳಿದು ತಟಸ್ಥವಾಗಿ ಉಳಿಯುವ ತಂತ್ರ ಅನುಸರಿಸಿತು. ಇದರಿಂದಾಗಿ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಜೆಡಿಎಸ್ ವಿರುದ್ಧ ಘೋಷಣೆ ಕೂಗಿ,ಚುನಾವಣಾ ಸಭಾಂಗಣದಿಂದ ಹೊರನಡೆದ್ರು.
ಈ ಹಿಂದೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್-ಜೆಡಿಎಸ್ ಬಿಜೆಪಿಗೆ ಒಮ್ಮೆಯೂ ಪಾಲಿಕೆ ಚುಕ್ಕಾಣಿಯನ್ನ ಬಿಟ್ಟುಕೊಟ್ಟಿರಲಿಲ್ಲ. ಈ ಬಾರಿಯೂ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಕಾಂಗ್ರೆಸ್ ಗೆ ಕೋರಿದ್ದ ಜೆಡಿಎಸ್ ನಿರಾಶಗೊಂಡು ತಟಸ್ಥ ನಿಲುವು ತಾಳಿತು. ಹೀಗಾಗಿ ಇಬ್ಬರ ಜಗಳದಿಂದ ಮೂರನೇಯವರಿಗೆ ಲಾಭ ಎನ್ನೋ ಹಾಗೆ ಬಿಜೆಪಿ ಇದರ ಲಾಭ ಪಡೆದಿದೆ. ಆದ್ರೆ ಇದೇ ಮೊದಲ ಬಾರಿಗೆ ಮೈಸೂರು ಪಾಲಿಕೆಯಲ್ಲಿ ಕಮಲ ಅರಳಿದ್ದು, ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸುವತ್ತ ಬಿಜೆಪಿ ಹೆಜ್ಜೆಯಿಟ್ಟಿದೆ.
ಕರ್ನಾಟಕ ಟಿವಿ – ಮೈಸೂರು