Sunday, November 16, 2025

Latest Posts

ಓರಿಜಿನಲ್‌ ಹಿಂದೂಗಳು ನಮ್ಮ ಹಿಂದೆ – ಸಂತೋಷ್ ಲಾಡ್ ತಿರುಗೇಟು

- Advertisement -

ಬೆದರಿಕೆ ಕರೆಗಳಿಗೆ ನಾವೆಂದಿಗೂ ಹೆದರುವವರಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷ ನಿಂತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿರುವ ಎಲ್ಲಾ ಓರಿಜಿನಲ್‌ ಹಿಂದೂಗಳು ನಮ್ಮ ಹಿಂದೆ ಇದ್ದಾರೆ. ಐಡಿಯಾಲಜಿಯಲ್ಲಿ ವ್ಯತ್ಯಾಸ ಇರಬಹುದು, ಆದರೆ ಯಾರೋ ಬೆದರಿಕೆ ಕರೆ ಮಾಡುತ್ತಿದ್ದಾರೆ. ಯಾರು ಮಾಡ್ತಿದ್ದಾರೆ, ಯಾಕೆ ಮಾಡ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದರು.

ಆರ್‌ಎಸ್‌ಎಸ್ ಕುರಿತು ಮಾತನಾಡಿದ ಅವರು, ಆರ್‌ಎಸ್‌ಎಸ್ ಅನ್ನು ಹಿಂದೆಯೇ ಬ್ಯಾನ್ ಮಾಡಿದವರು ಯಾರು ಗೊತ್ತಾ? ಇದೇ ಇವರು ಸ್ಟ್ಯಾಚು ನಿರ್ಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಬ್ಯಾನ್ ಮಾಡಿದ್ದರು. ಯಾಕೆ ಬ್ಯಾನ್ ಮಾಡಿದರು ಎಂಬುದನ್ನು ಕೇಳಿಕೊಳ್ಳಲಿ. ನಮ್ಮತ್ತ ಬೊಟ್ಟು ತೋರಿಸಿ ಬೈದು ಹೆಸರಿಸಲು ಬಂದ್ರೆ ನಾವು ತಲೆಬಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ನಾನು ಯಾವತ್ತೂ ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿಲ್ಲ. ನಾನು ವಿಚಾರಧಾರೆ ಆಧಾರಿತವಾಗಿ ಮಾತನಾಡುತ್ತೇನೆ. ವೈಯಕ್ತಿಕವಾಗಿ ಎಂದೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ನಾನು ತಪ್ಪಾಗಿ ಹೇಳಿದ್ದರೆ ಸಾಬೀತುಪಡಿಸಲಿ. ಈಗ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಬಂದಿದೆ, ಆದರೆ ಹೆದರಿಕೊಳ್ಳುವ ಅಗತ್ಯವಿಲ್ಲ. ಕಾಂಗ್ರೆಸ್, ಹಿಂದೂ, ಮುಸ್ಲಿಂ, ಸಿಖ್ ಎಲ್ಲ ಸಮುದಾಯದವರೂ ಅವರ ಜೊತೆ ಇದ್ದಾರೆ. ಬೇರೆ ಯಾವುದೇ ಸಚಿವರಿಗೆ ಇಂತಹ ಬೆದರಿಕೆಗಳು ಬಂದಿಲ್ಲ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಸಂತೋಷ ಲಾಡ್, ಅದು ಸಂಪೂರ್ಣವಾಗಿ ಪಕ್ಷದ ನಿರ್ಧಾರ. ಯಾವ ಮಾನದಂಡದ ಆಧಾರದ ಮೇಲೆ ಮಾಡಬೇಕು ಎನ್ನುವುದೂ ಪಕ್ಷಕ್ಕೆ ಬಿಟ್ಟ ವಿಷಯ ಎಂದರು. ಸಿಎಂ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರೇಟರ್ ಬೆಂಗಳೂರು ವಿಷಯಗಳ ಕುರಿತು ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ನಿಜ. ಸಿಎಂ ಮತ್ತು ಡಿಸಿಎಂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭವಾಗಿದೆ ಎಂದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss