- Advertisement -
www.karnatakatv.net :ತುಮಕೂರು : ನಗರದ ಅಬಕಾರಿ ಇಲಾಖೆಯವರು ಜಪ್ತಿ ಮಾಡಿದ್ದ ಸುಮಾರು ೯ ಲಕ್ಷ ಮೌಲ್ಯದ ಮದ್ಯವನ್ನು ನಾಶಪಡಿಸಲಾಯಿತು. ಶಿರಾಗೇಟ್ ಬಳಿಯ ಕೆ.ಎಸ್.ಬಿ.ಸಿ.ಎಲ್ ಡಿಪೋ ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಮದ್ಯವನ್ನು ಮೋರಿಗೆ ಚೆಲ್ಲಲಾಯಿತು.1,688 ಲೀಟರ್ ಹಾಟ್ ಡ್ರಿಂಕ್ಸ್ ಹಾಗೂ 475 ಲೀಟರ್ ಬಿಯರ್ ನಾಶ ಮಾಡಲಾಯಿತು.
ತಹಶಿಲ್ದಾರ್ ಮೋಹನ್ ಕುಮಾರ್, ಅಬಕಾರಿ ಡಿಎಸ್ಪಿ ಸಿದ್ದಲಿಂಗಸ್ವಾಮಿ ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಜಯಪ್ರದಾ ಸಮಕ್ಷಮದಲ್ಲಿ ಮಾರ್ಗಸೂಚಿಯಂತೆ ಮದ್ಯ ನಾಶಪಡಿ ಕ್ರಮ ಕೈಗೊಳ್ಳಲಾಗಿದೆ.
ದರ್ಶನ್, ಕರ್ನಾಟಕ ಟಿವಿ- ತುಮಕೂರು
- Advertisement -