www.karnatakatv.net : ರಾಯಚೂರು :ಕೊರೊನಾ ಮೂರನೇ ಅಲೆ ಭಯದ ನಡುವೆಯೂ ಶಾಲೆಗಳಲ್ಲಿ ರೂಲ್ಸ್ ಬ್ರೇಕ್ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ .
ಈ ಶಾಲೆ ಆರಂಭವಾದ ಎರಡನೇ ದಿನಕ್ಕೆ ಮಕ್ಕಳಿಗೆ ಮಾಸ್ಕ್ ಇಲ್ಲ , ಬೆಂಚ್ ಗೆ ಐದು ವಿದ್ಯಾರ್ಥಿಗಳನ್ನು ಕೂರಿಸಿದ್ದಾರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಗೋರ್ಕಲ್ ಗ್ರಾಮದಲ್ಲಿನ ಪ್ರೌಢ ಶಾಲೆಯ ಅವ್ಯವಸ್ಥೆ ಇದು. ರಾಜ್ಯದ ನಿಯಮ ಅನುಸಾರ ಎಲ್ಲಾ ಶಾಲೆಗಳಿಗೆ ಕೊಠಡಿಗಳಲ್ಲಿ ಸ್ವಚ್ಛತೆಯನ್ನೂ ಮಾಡಬೇಕು ಸ್ಯಾನಿಟೈಸ್ ಮಾಡಿ ವಿದ್ಯಾರ್ಥಿಗಳಿಗೆ ಬೆಂಚ್ ಗೆ ಒಂದು ವಿದ್ಯಾರ್ಥಿಯನ್ನು ಕೂರಿಸಬೇಕು.
ಆದರೆ ಈ ಶಾಲೆಯಲ್ಲಿ ಧೂಳು ತುಂಬಿದ ಕೊಠಡಿಗಳು. ಅಂತದ್ರಲ್ಲೇ ಶಿಕ್ಷಕರು ಪಾಠ ಮಾಡುವುದು ಹಾಗೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾಸ್ಕ್ ಧರಿಸದೆ ಇರುವುದು ಕಂಡುಬಂದಿದೆ.
ಕೊರೊನಾ ರೂಲ್ಸ್ ಬಗ್ಗೆ ಮುಖ್ಯೋಪಾಧ್ಯಾಯರನ್ನ ಕೇಳಿದಾಗ, ನಮ್ಮಲ್ಲಿ ಹಣ ಇಲ್ಲ ಎನ್ನುತಾರೆ. ಹಾಗೇ ಗ್ರಾಮ ಪಂಚಾಯತಿಗಳಲ್ಲಿ ಕೇಳಿದಾಗ ಸ್ಯಾನಿಟೈಸ್ ಮಾಡಿದಿವಿ ಎನ್ನುತ್ತಾರೆ, ಆದರೆ ಇಲ್ಲಿ ಗಂಡ ಹೆಂಡತಿ ನಡುವೆ ಕೂಸು ಬಡವಾಯ್ತು ಅನ್ನೋ ಹಾಗೆ ಗ್ರಾಮ ಪಂಚಾಯ್ತಿ ಮತ್ತು ಶಿಕ್ಷಣ ಇಲಾಖೆ ನಡುವೆ ಮಕ್ಕಳಿಗೆ ಫಜೀತಿ ಯಾಗಿದೆ. ಇನ್ನೂ ಶಿಕ್ಷಣ ಇಲಾಖೆ ಶಾಲೆಗಳತ್ತ ಮತ್ತು ಮಕ್ಕಳ ಆರೋಗ್ಯದ ಕಡೆ ಗಮನ ಹರಸಬೇಕು.
ಅನೀಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು