Tumakuru: ತ್ರಿವಿಧ ದಾಸೋಹಿಗಳಾದ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 7ನೇ ಪುಣ್ಯ ಸ್ಮರಣೆ ಆಚರಣೆ

Tumakuru News: ಕರ್ನಾಟಕ ರತ್ನ, ಪದ್ಮ ವಿಭೂಷಣ, ತ್ರಿವಿಧ ದಾಸೋಹಿಗಳು ಆದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 07ನೇ ವರ್ಷದ ಪುಣ್ಯ ಸ್ಮರಣೋತ್ಸವವನ್ನು ಆಚರಿಸಲಾಯಿತು.

ತಿಪಟೂರು ನಗರದ ಅರಳಿಕಟ್ಟೆ ಸುತ್ತ ಮುತ್ತಲಿನ ಎಲ್ಲಾ ವ್ಯಾಪಾರಸ್ಥರು ಹಾಗೂ ಮಹಾ ಸ್ವಾಮೀಜಿಗಳ ಭಕ್ತ ವೃಂದದವರು, ಶ್ರೀ ಶಾರದಾ ದೇವಿ ಚಾರಿಟಬಲ್ ಟ್ರಸ್ಟ್ ಹಿರಿಯರ ಮನೆ ವೃದ್ದಾಶ್ರಮ, ಸೊಗಡು ಜನಪದ ಹೆಜ್ಜೆ ಸಂಘ, ಜೆಮ್ಸ್ ಫೌಂಡೇಶನ್, ಮತ್ತು ತರಕಾರಿ ಗಂಗಾಧರ ಸ್ನೇಹ ವೃಂದದವರು ಪುಣ್ಯ ಸ್ಮರಣೋತ್ಸವವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯರಾದ ಪ್ರಸನ್ನ ಕುಮಾರ್, ಸೊಪ್ಪು ಗಣೇಶ್, ತರಕಾರಿ, ಗಂಗಾಧರ್ , ಡಾ ಓಹಿಲಾ M S, ಸೊಗಡು ಜನಪದ ಹೆಜ್ಜೆ ರಿ. ಅಧ್ಯಕ್ಷರಾದ ಸಿರಿಗಂಧ ಗುರು, ರಂಗಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹೊಸಳ್ಳಿ ವಿಶ್ವನಾಥ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಗೊರಗನಹಳ್ಳಿ ಸಂಘದ ಅಧ್ಯಕ್ಷರಾದ ಸುರೇಶ್, ರೈತ ಸೇವಾ ಸಹಕಾರ ಸಂಘ ಹೊನ್ನವಳ್ಳಿ ಉಪಾಧ್ಯಕ್ಷರಾದ ಉಷಾ ಲೋಕೇಶ್, ಮಾಜಿ ಎಪಿಎಂಸಿ ಸದಸ್ಯರು ಮತ್ತು ಸಮಾಜಸೇವಕರಾದ ಬೋರ್ವೆಲ್ ಮಧು, ಕಂಟ್ರಾಕ್ಟರ್ ರಾಜಣ್ಣ, ಧರ್ಮಸ್ಥಳ ಸಂಘ ಕಸಬಾ ವಲಯದ ಮೇಲ್ವಿಚಾರಕರಾದ ಜಯಪ್ರಸಾದ್, ಶ್ರೀ ರಾಘವೇಂದ್ರ ಜೆವೆಲ್ಲೆರ್ಸ್ ಮಾಲೀಕರಾದ ವಿಜಯ್, ವೊಡಾಫೋನ್ ಚಂದ್ರು, ಸಂಗೀತ ಟೆಕ್ಸ್ಟೂರಿಯನ್ ಮಾಲೀಕರಾದ ರಮೇಶ್ , ಎಂಕೆ ಎಲೆಕ್ಟ್ರಿಕಲ್ಸ್ ಮಾಲೀಕರಾದ ಜಿತು ಬಾಯ್,ಶ್ರೀ ರಘುರಾಮ್ ಗ್ಲಾಸ್ ಅಂಡ್ ಪ್ಲೇವುಡ್ ಅಂಡ್ ಎಂಟರ್ಪ್ರೈಸಸ್ ಮಾಲೀಕರಾದ ರಮ್ಯಾ ಬದ್ರಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷರಾದ ಎಲೆಕಮಲಮ್ಮ, ಬಸವಣ್ಣ, ಸುಹಾಸ್, ಟಿಎಲ್ ಪಾಳ್ಯ ರಾಜಣ್ಣ, ಧರ್ಮಸ್ಥಳ ಸಂಘದ ನವ ಜೀವನ ಸಂಘದ ಅಧ್ಯಕ್ಷರಾದ ಲಿಂಗರಾಜು ಹಳೆಪಾಳ್ಯ, ಪಚ್ಚೆ ಮುತ್ತು, ರವಿ ಇನ್ನಿತರರು ಈ ಪುಣ್ಯ ಕಾರ್ಯದಲ್ಲಿ ಉಪಸ್ಥಿತರಿದ್ದರು, ಹಾಗೂ ಈ ಸಂದರ್ಭದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

About The Author