www.karnatakatv.net : ಧಾರವಾಡ: ಮತ ಏಣಿಕೆ ಕೇಂದ್ರದ ಹೊರಗಡೆ ಏಜೆಂಟ್ ಹಾಗೂ ಪೋಲಿಸ್ ರ ಜೊತೆ ವಾಗ್ವಾದ ನಡೆದ ಘಟನೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿದೆ.
ಕೃಷಿ ವಿವಿ ಆವರಣದ ಹೊರಗಡೆ ಏಜಂಟ್ ಗಲಾಟೆ ಮಾಡಿಕೊಂಡಿದ್ದು, ಅಭ್ಯರ್ಥಿಗಳ ಪರವಾಗಿ ಒಬ್ಬ ಏಜಂಟ್ ಗೆ ಮಾತ್ರ ಅವಕಾಶ ನೀಡಿರುವ ಹಿನ್ನಲೆಯಲ್ಲಿ ನಾನು ಮತ ಎಣಿಕೆ ಕೇಂದ್ರಕ್ಕೆ ಹೋಗುತ್ತೆನೆಂದು ಪಟ್ಟು ಹಿಡಿದ ಏಜಂಟ್ ಜೊತೆಗೆ ಪೊಲೀಸರು ವಾಗ್ವಾದ ನಡೆಸಿದ್ದಾರೆ.
ಇನ್ನೂ ಇದೇ ಸಮಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಏಜಂಟ್ ಮೇಲೆ ಗರಂ ಆಗಿದ್ದಾರೆ. ಡಿಸಿ ಹೇಳಿದರು ಕ್ಯಾರೆ ಎನ್ನದ ಎಜಂಟ್ ಅರ್ಧ ಗಂಟೆಗೂ ಅಧಿಕ ಸಮಯ ಕಿರಿಕ್ ಮಾಡಿದ್ದಾನೆ.
ಕರ್ನಾಟಕ ಟಿವಿ -ಹುಬ್ಬಳ್ಳಿ





