ತಮಿಳುನಾಡಲ್ಲೂ ಗ್ರೀನ್ ಸಿಗ್ನಲ್…!

www.karnatakatv.net :ಕರ್ನಾಟಕದಲ್ಲಿ ಗಣೇಶ ಹಬ್ಬ ಆಚರಣೆಗೆ ವಿನಾಯಿತಿ ಸಿಕ್ಕ ಬೆನ್ನಲ್ಲೇ ಇದೀಗ ನೆರೆಯ ತಮಿಳುನಾಡಿನಲ್ಲೂ  ಗಣೇಶ ಹಬ್ಬ ಆಚರಣೆಗೆ ನಿಯಮಗಳ ಸಡಿಲಿಕೆ ಮಾಡಲಾಗಿದೆ. 

ಸಾರ್ವಜನಿಕ ಒತ್ತಾಯದ ಬಳಿಕ ಗಣೇಶ ಹಬ್ಬದಂದು ರಾಜ್ಯದಲ್ಲಿ ಸಣ್ಣ ದೇವಾಯಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಗಣೇಶ ಹಬ್ಬದ ಮಾರ್ಗಸೂಚಿ ಬಿಡುಗಡೆಗೊಳಿಸುವಂತೆ ಹಿಂದು ಸಂಘಟನೆ ಎಚ್ಎಂಕೆ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಈ ಅರ್ಜಿ ವಿಚಾರಣೆ ಬಳಿಕ ನ್ಯಾಯಾಲಯದ ಮುಂದೆ ಈ ಕುರಿತು ತಿಳಿಸಿರುವ ಡಿಎಂಕೆ ಸರ್ಕಾರ, ಗಣೇಶ ಹಬ್ಬದಂದು ಚಿಕ್ಕ ದೇವಾಲಯಗಳನ್ನು ತೆರೆಯಲು ಅವಕಾಶ ನೀಡಿದೆ. ಜೊತೆಗೆ ಗಣೇಶ ಹಬ್ಬದಂದು ಮನೆಯಲ್ಲಿ ಕೂರಿಸಿದ ಗಣೇಶಗಳನ್ನು ಸಣ್ಣ ದೇವಾಲಯಗಳನ್ನು ತಂದು ಇಡಬೇಕು. ಈ ಗಣೇಶ ಮೂರ್ತಿಗಳ ವಿಸರ್ಜನೆ ಜವಾಬ್ದಾರಿಯನ್ನು ಡಿಎಂಕೆ ಸರ್ಕಾರ ತೆಗೆದುಕೊಳ್ಳಲಿದೆ ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ  ಹಿನ್ನಲೆ ವೀಕೆಂಡ್​ಗಳನ್ನು ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸುವದಾಗಿ ಸರ್ಕಾರ ಘೋಷಣೆ ಹೊರಡಿಸಿತ್ತು. ಜೊತೆಗೆ ಬೀಚ್​ಗಳಲ್ಲೂ ಕೂಡ ಭಾನುವಾರ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ.

ಸಾರ್ವಜನಿಕ ಹಬ್ಬಗಳ ಆಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದ ಬಳಿಕ ರಾಜ್ಯದಲ್ಲಿ ಸೆಪ್ಟೆಂಬರ್​ 10ರಂದು ಗಣೇಶ ಹಬ್ಬ ಆಚರಣೆ ಮಾಡಲು  ನಿರ್ಧರಿಸಲಾಗಿದೆ. ಕಳೆದ ಬಾರಿಗಿಂತೆ ಈ ಬಾರಿ ಕೊಂಚ ನಿಯಮಗಳ ಸಡಿಲಿಕೆಯಾಗಿದ್ದು, ಜನರು ಪ್ರತ್ಯೇಕವಾಗಿ ಗಣೇಶ ಮೂರ್ತಿಯನ್ನು ಸಮುದ್ರದಲ್ಲಿ ವಿಸರ್ಜಿಸಬಹುದಾಗಿದೆ. ಆದರೆ, ವಿಸರ್ಜನೆ ವೇಳೆ ಯಾವುದೇ ಮೆರವಣಿಗೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

About The Author