Haveri News: ಅರಷಿನಗುಪ್ಪಿ ಅರಣ್ಯ ಪ್ರದೇಶದಲ್ಲಿ 500 ಹಣ್ಣಿನ ಗಿಡಗಳ ನಾಟಿ

Haveri News: ಹಾನಗಲ್ ತಾಲೂಕಿನ ಅರಷಿನಗುಪ್ಪಿ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾನಗಲ್, ಅರಣ್ಯ ಇಲಾಖೆ ಹಾನಗಲ್ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಷಿನಗುಪ್ಪಿ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಮಕರವಳ್ಳಿ ವಲಯದ *ಉಪ ವಲಯ ಅರಣ್ಯಾಧಿಕಾರಿ ಶಿಲ್ಪಾ ಗೋಂದಕರ* ಅವರು ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ

ಈ ವೇಳೆ ಮಾತನಾಡಿದ ಅವರು, ಮಕ್ಕಳು ತಮ್ಮ ಹಿರಿಯರು ಹಾಗೂ ತಾಯಿಯ ಹೆಸರಿನಲ್ಲಿ ಒಂದೊಂದು ಗಿಡವನ್ನು ನೆಟ್ಟು ಬೆಳೆಸಬೇಕು. ಗಿಡಗಳಿಂದ ನಮಗೆ ಆಹಾರ ಹಾಗೂ ಉಸಿರಾಡಲು ಶುದ್ಧ ಗಾಳಿ ದೊರೆಯುತ್ತದೆ. ಮರಗಳು ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡುವ ತಾಣಗಳಾಗಿವೆ. ಪರಿಸರವನ್ನು ನಾಶ ಮಾಡಿದರೆ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ *ಸುಮಾರು 500 ಹಣ್ಣಿನ ಗಿಡಗಳನ್ನು ನಾಟಿ ಮಾಡುವ ಮೂಲಕ ಪ್ರಾಣಿ-ಪಕ್ಷಿಗಳ ಹಸಿವು ಮತ್ತು ದಾಹ ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ* ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಕರವಳ್ಳಿ ವಲಯದ ಬೀಟ್ ಅರಣ್ಯಾಧಿಕಾರಿ *ಗಣೇಶ ಡಿ.ಎಸ್.*ಮಕ್ಕಳು ಹಾಗೂ ನಾಗರಿಕರು ತಾಯಿಯಂತೆ ಮರಗಳನ್ನು ಪ್ರೀತಿಸಬೇಕು. ಪರಿಸರ ಸಂರಕ್ಷಣೆ ಮಕ್ಕಳಿಂದಲೇ ಆರಂಭವಾಗಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ *ರಘುರಾಮ ನಾಯ್ಕ* ಮಾತನಾಡಿ, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರ ಸಂರಕ್ಷಣೆ ಒಂದು ದಿನಕ್ಕೆ ಸೀಮಿತವಾಗದೆ ನಿರಂತರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.

About The Author