Saturday, April 19, 2025

Latest Posts

ಹೊರರಾಜ್ಯದ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು…!

- Advertisement -

www.karnatakatv.net :ಚಾಮರಾಜನಗರ: ಕೇರಳದಲ್ಲಿ ಕೋರನಾ ಸೋಂಕು ಹೆಚ್ಚಾಗಿರೋದಲ್ಲದೆ ನಿಫಾ ವೈರಸ್  ಕಂಡು ಬರ್ತಿರೋ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದೆ. ಹೀಗಾಗಿ ಕರ್ನಾಟಕದ ಗಡಿಜಿಲ್ಲೆ ಚಾಮರಾಜನಗರದ ಮೂಲೆಹೊಳೆ ಚೆಕ್ ಪೋಸ್ಟ್ ಅಲ್ಲಿ ಪೊಲೀಸರು ಹೊರರಾಜ್ಯಗಳಿಂದ ಬರುತ್ತಿರೋರ ಬಗ್ಗೆ ತೀವ್ರ ನಿಗಾ ಇಡ್ತಿದ್ದಾರೆ.

ರಾಜ್ಯದ ಗಡಿ ಪ್ರವೇಶ ಮಾಡುವ ಪ್ರತಿಯೊಂದು ವಾಹನದ ಪ್ರಯಾಣಿಕರೂ ಆರ್ಟಿ ಪಿಸಿಆರ್ ವರದಿ ಮತ್ತು E -pass ಕಡ್ಡಾಯವಾಗಿ ಹೊಂದಿರಬೇಕು, ಪೂರ್ಣಪ್ರಮಾಣದಲ್ಲಿ ಎರಡು ಲಸಿಕೆಯನ್ನಾದರೂ ಕಡ್ಡಾಯವಾಗಿ ಪಡೆದಿರಬೇಕು ಅನ್ನೋ ಸರ್ಕಾರದ ಆದೇಶವನ್ನ ಮೇರೆಗೆ ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಒಳಗೊಂಡಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸ್ತಿದ್ದಾರೆ.

ಇನ್ನು ಇ-ಪಾಸ್ ಅಥವಾ ಆರ್ ಟಿಪಿಸಿಆರ್ ವರದಿ ಇಲ್ಲದ ಹೊರರಾಜ್ಯಜ ವಾಹನ ಸವಾರರಿಗೆ ಸಂಪೂರ್ಣ ನಿಷೇಧವನ್ನು ಹೇರಲಾಗಿದೆ .

ಪ್ರಸಾದ್,  ಕರ್ನಾಟಕ ಟಿವಿ -ಚಾಮರಾಜನಗರ

- Advertisement -

Latest Posts

Don't Miss