- Advertisement -
www.karnatakatv.net: ರಾಯಚೂರು: ಕೃಷ್ಣ ನದಿ ಹಿನ್ನೀರು ಪ್ರದೇಶದ ಬಳಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರಿಗೆ ಮೊಸಳೆಯೊಂದು ಕಾಣಿಸಿಕೊಂಡಿದೆ.
ರಾಯಚೂರು ತಾಲೂರಿನ ನಾರದಗುಡ್ಡೆ ದೇವಾಲಯಕ್ಕೆ ತೆರಳುತ್ತಿದ್ದ ಭಕ್ತರು ಹಿನ್ನೀರಿನ ಮಧ್ಯೆಯಿದ್ದ ಬಂಡೆಯೊಂದರ ಮೇಲೆ ಏಕಾಂತವಾಗಿ ವಿಹಾರ ಮಾಡ್ತಿದ್ದ ಮೊಸಳೆಯನ್ನು ಕಂಡು ಹೌಹಾರಿದ್ರು. ಯಾರಿಗೂ ತೊಂದರೆ ಕೊಡದೆ ಶಾಂತವಾಗಿ ಬಿಸಿಲು ಕಾಯುತ್ತಿದ್ದ ಬೃಹದಾಕಾರದ ಈ ಮೊಸಳೆಯ ವಿಡಿಯೋವನ್ನು ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.
ಇನ್ನು ಕೃಷ್ಣಾ ನದಿಯ ಜುರಾಲಾ ಯೋಜನೆಯ ಹಿನ್ನೀರಿನಲ್ಲಿ ನೂರಾರು ಸಂಥ್ಯೆಯಲ್ಲಿ ಮೊಸಳೆಗಳಿವೆ. ಇದನ್ನು ಲೆಕ್ಕಿಸದೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಭಕ್ತರು ದೋಣಿ ಅಥವಾ ಸ್ಟೀಮರ್ ಗಳ ಮುಖಾಂತರ ಈ ಹಿನ್ನೀರಿನ ಮಾರ್ಗವಾಗಿ ದೇವರ ದರ್ಶನ ಪಡೆಯುತ್ತಾರೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -