Thursday, February 6, 2025

Latest Posts

ಹಿಂದಿ ದಿವಸ್ ಆಚರಣೆಯಲ್ಲ ಹಿಂದಿ ವಿರೋಧಿ ಆಚರಣೆ..!

- Advertisement -

www.karnatakatv.net :ರಾಯಚೂರು: ಹಿಂದಿ ದಿವಸ್ ಆಚರಣೆಯನ್ನ ವಿರೋಧಿಸಿ ಕರ್ನಾಟಕ ರಕ್ಷಣ ವೇದಿಕೆಯ ಕಾರ್ಯಕರ್ತರು ಹಿಂದಿ ನಾಮ‌ಫಲಕಕ್ಕೆ ಮಸಿ ಬಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ಕೇಂದ್ರ ಸರ್ಕಾರ  ಹಿಂದಿ ಭಾಷೆಯನ್ನ ಒತ್ತಾಯದಿಂದ ಹೇರುವ ಕೆಲಸ ಮಾಡುತ್ತಿದೆ ಇದು ಸರಿಯಾದ ಕ್ರಮವಲ್ಲ. ಮೈಸೂರು ಬ್ಯಾಂಕ್ ವಿಲೀನಗೊಳಿಸಿ ಎಸ್ ಬಿ ಐ, ವಿಜಯ ಬ್ಯಾಂಕ್ ನ್ನ ವಿಲೀನಗೊಳಿಸಿ ಗುಜರಾತಿಗಳ ಬ್ಯಾಂಕ್ ಗೆ ಸೇರಿಸುವ ಮೂಲಕ  ಹಿಂದಿ‌ ಭಾಷಿಕರಿಗರಿಗೆ ಹುದ್ದೆಗಳ‌ ನೀಡುವುದು‌ ಹುನ್ನಾರವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಇಂದು ಹಿಂದಿ ದಿವಸ್ ಆಚರಣೆಯಲ್ಲ ಹಿಂದಿ ವಿರೋಧಿ ಆಚರಣೆ ಮಾಡಿದ್ದೇವೆ. ಕೂಡಲೇ ಕೇಂದ್ರ ಸರ್ಕಾರ ತನ್ನ ಹಿಡನ್ ಅಜೆಂಡಾ ಕೈ ಬಿಡಬೇಕು‌ ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss