71ನೇ ವಸಂತಕ್ಕೆ ಕಾಲಿಟ್ಟ ರಾಷ್ಟ್ರ ನಾಯಕ, ಪ್ರಧಾನಿ ಮೋದಿ

www.karnatakatv.net: ಭಾರತೀಯ ಜನತಾ ಪಕ್ಷವು ಇಂದು ಹಲವು ಜನಪರ ಕಾರ್ಯಕ್ರಮಗಳನ್ನು ಯೋಜಿಸಿದೆ. ಮೋದಿ ಜೀವನ ಆಧಾರಿತ ಚಲನಚಿತ್ರ ಪ್ರದರ್ಶನ, ರಕ್ತದಾನ ಶಿಬಿರಗಳು, ಸ್ವಚ್ಛತೆ ಮತ್ತು ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ನಡೆಸಲಿದೆ ಎಂದು ತಿಳಿದುಬಂದಿದೆ.
ಇಂದು 71ನೇ ವಸಂತಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ. ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದಿಗ್ವಿಜಯ್ ಸಿಂಗ್, ಬಿಎಸ್ ಯಡಿಯೂರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವರು ಗಣ್ಯಾತಿಗಣ್ಯರು ಶುಭಾಶಯ ಕೋರಿದ್ದಾರೆ.
ಇನ್ನು ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಇಂದು ರಕ್ತದಾನ ಶಿಬಿರ, ಲಸಿಕಾ ಅಭಿಯಾನ, ಸ್ಪಚ್ಛತೆ ಬಗ್ಗೆ ಜಾಗೃತಿ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಮಧ್ಯಪ್ರದೇಶದ ಭೂಪಾಲ್ ನಲ್ಲಿ 71 ಅಡಿ ಉದ್ದದ ಲಸಿಕೆ ಆಕಾರದ ಕೇಕ್ ಕತ್ತರಿಸಿದ್ರು. ಪಾಟ್ನಾ ಹಾಗೂ ದೇಶದ ನಾನಾ ಕಡೆ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ಸಿಹಿ ಹಂಚೋ ಮೂಲಕ ಆಚರಿಸಲಾಯ್ತು.
ಇನ್ನು ಇಂದೂ ಕೂಡ ಪ್ರಧಾನ ಮಂತ್ರಿ ಮೋದಿ ಎಂದಿನಂತೆ ತಮ್ಮ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ರು. Fvdvg ಪಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಮುನ್ನಾ ದಿನ ಬಿಜೆಪಿ ಕಾರ್ಯಕರ್ತರು ಲಸಿಕೆ ಆಕಾರದ ಕೇಕ್ ಪಕ್ಕದಲ್ಲಿ ಕುಳಿ ತು ಆಚರಿಸಿ ದ್ದಾರೆ.

About The Author