- Advertisement -
www.karnatakatv.net: ರಾಯಚೂರು : ಚೆಕ್ ಪೋಸ್ಟ್ ಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಲಾರಿ ಚಾಲಕನ ಸಾವು ಸಂಭವಿಸಿದೆ. ಸಹಾಯಕ ಚಾಲಕನಿಗೆ ಗಂಭೀರ ಗಾಯ ಆಗಿದ್ದು, ರೀಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.
ಲಾರಿ ಟೈಯರ್ ಬ್ಲಾಸ್ಟ್ ಆಗಿ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಚೆಕ್ ಪೋಸ್ಟ್ ಗೆ ಡಿಕ್ಕಿಯಾಗಿರುವ ಲಾರಿ ಚಾಲಕನ ದೇಹ ಎರಡು ತುಂಡಾಗಿದ್ದು, ಇಡೀ ಚೆಕ್ ಪೋಸ್ಟ್ ಸಂಪೂರ್ಣ ನಾಶವಾಗಿದೆ. ಚಾಲಕನ ಮೃತದೇಹ ರೀಮ್ಸ್ ಆಸ್ಪತ್ರೆಗೆ ರವಾನೆ ಮಾಡಿದು ,ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು
- Advertisement -